ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಸಮೀಕ್ಷೆಯಲ್ಲಿ ಹಿಂದೂ ಧರ್ಮ ದಾಖಲಿಸಲು ವಿಶ್ವಕರ್ಮರಿಗೆ ಕರೆ – ಸುಭಾಷ್ ಗುತ್ತೇದಾರ.

On: September 23, 2025 2:52 PM

ಆಳಂದ: “ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ವಿಶ್ವಕರ್ಮ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ದಾಖಲಿಸಬೇಕು. ಜಾತಿ ವಿಭಾಗದಲ್ಲಿ ತಮ್ಮ ಸಂಬಂಧಿತ ವಿಶ್ವಕರ್ಮ ಜಾತಿಗಳನ್ನು ಸ್ಪಷ್ಟವಾಗಿ ನಮೂದಿಸಬೇಕು,” ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಕರೆ ನೀಡಿದರು.

ಅವರು ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಎ.ವಿ. ಪಾಟೀಲ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಅಖಿಲ ಕರ್ನಾಟಕ ತಾಲೂಕು ಮಟ್ಟದ ವಿಶ್ವಕರ್ಮ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಬಳಿಕ ವಿಶ್ವಕರ್ಮರ ರಥಯಾತ್ರೆಗೆ ಚಾಲನೆ ನೀಡಿ, ಪ್ರಮುಖ ಬೀದಿಗಳಲ್ಲಿ ನಡೆದ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡರು.

“ವಿಶ್ವಕರ್ಮ ಸಮಾಜವು ದೇಶದ ಇತಿಹಾಸಕ್ಕೆ ಅಪಾರ ಕೊಡುಗೆ ನೀಡಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಮಾಜವು ಶಿಕ್ಷಣ, ಸಂಘಟನೆ ಹಾಗೂ ಆರ್ಥಿಕ-ಸಾಮಾಜಿಕ-ರಾಜಕೀಯ ಕ್ಷೇತ್ರಗಳಲ್ಲಿ ಮುಂದುವರಿಯುವುದು ಅತ್ಯವಶ್ಯಕ,” ಎಂದು ಅವರು ಸಲಹೆ ನೀಡಿದರು.

ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ ಅಫಜಲಪುರದ ಬ್ರಹ್ಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಜಗತ್ತಿನ ಯಾವುದೇ ಕ್ಷೇತ್ರದಲ್ಲೂ ಸೌಂದರ್ಯಕ್ಕೆ ವಿಶ್ವಕರ್ಮರ ಕಾಯಕದ ಕೊಡುಗೆ ಅಪ್ರತಿಮ. ಬಸವಣ್ಣನವರ ಕಾಯಕತತ್ವವನ್ನು ಪಾಲಿಸುವ ಮೂಲಕ ಸಮಾಜವನ್ನು ಮುನ್ನಡೆಸುವ ಕಾರ್ಯವನ್ನು ವಿಶ್ವಕರ್ಮರು ನಿರಂತರವಾಗಿ ಮಾಡುತ್ತಿದ್ದಾರೆ. ರೈತನಿಗೆ ಬೆಂಬಲವಾಗಿರುವ ಶ್ರಮಿಕ ಶಕ್ತಿ ವಿಶ್ವಕರ್ಮರದು,” ಎಂದು ಹೇಳಿದರು.

ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಆರಂಭವಾಯಿತು. ಡಾ. ವಿಶ್ವನಾಥ್ ಬಿ. ಸುತಾರ್ ಧ್ವಜಾರೋಹಣ ನೆರವೇರಿಸಿದರು. ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು, ವಿಶ್ವಕರ್ಮ ಸಂಘದ ಅಧ್ಯಕ್ಷ ತಡಕಲ ಬಸವರಾಜ್ ವಿಶ್ವಕರ್ಮ, ಉದ್ಯಮಿ ಶ್ರೀಶೈಲ ಸುತಾರ್, ಮಹೇಶ್ ಗೌಳಿ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಕಲ್ಯಾಣಿ ತುಕಾಣಿ, ನಿವೃತ್ತ ಪಿಎಸ್‌ಐ ಚಂದ್ರಕಾಂತ್ ಸೋನಾರ್, ನ್ಯಾಯವಾದಿ ಉದಯ್ ಕುಮಾರ್, ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಹದೇವ್ ಕೆ. ಪೋದ್ದಾರ, ಮೌನೇಶ್ವರ ಟ್ರಸ್ಟ್ ಅಧ್ಯಕ್ಷ ರಘುವೀರ್ ಸೋನಾರ್, ಸುನಿಲ್ ಸುತಾರ್, ಗಣೇಶ್ ಕಮ್ಮಾರ್ ಹಾಗೂ ಡಾ. ಮೋನಪ್ಪ ಎಲ್. ಸುತಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಸೂರ್ಯಕಾಂತ್ ಬಡಿಗೇರ್ ಉಪನ್ಯಾಸ ನೀಡಿದರು.

ಸುಜ್ಞಾನಿ ಪೋದ್ದಾರ ನಿರೂಪಿಸಿದರು. ದೇವಿಂದ್ರಪ್ಪ ಮಾಸ್ಟರ್ ಸ್ವಾಗತಿಸಿದರು. ಮನೋಹರ ಸೋನಾರ್ ವಂದನೆ ಸಲ್ಲಿಸಿದರು. ನಂತರ ರಥಯಾತ್ರೆ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಬಳಿಕ ನಡೆದ ವಿಶ್ವಕರ್ಮರ ಬೃಹತ್ ಸಮಾವೇಶದಲ್ಲಿ ರಾಜಕೀಯ ನಾಯಕರೂ, ವಿವಿಧ ಮಠಾಧೀಶರೂ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಲ್ಲದೆ, ಸಮಾಜ ಸಾಧಕರಿಗೆ ಕಲಾ ಚೇತನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಿಂದ ವಿಶ್ವಕರ್ಮ ಸಮುದಾಯದ ಸದಸ್ಯರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಮಣ್ಣ ಸುತಾರ್, ವಿರೇಶ ಎಂ. ಪೋದ್ದಾರ, ರಾಜಕುಮಾರ ಸುತಾರ್ ಪಡಸಾವಳಿ ಸೇರಿದಂತೆ ಘಟಕಗಳ ಅಧ್ಯಕ್ಷರು ಹಾಗೂ ಹಿರಿಯ-ಕಿರಿಯರು ಹಾಜರಿದ್ದರು.

Join WhatsApp

Join Now

Leave a Comment

error: Content is Protected!