ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ತಡೋಳ ಗ್ರಾಮ ಪಂಚಾಯತಿಯಲ್ಲಿ ಕಿಸಾನಸಭಾ ಪ್ರತಿಭಟನಾ ಧರಣಿ.

On: August 18, 2025 10:28 PM

ಆಳಂದ: ತಾಲೂಕಿನ ಖಜೂರಿ ವಲಯದ ಗಡಿಭಾಗದ ತಡೋಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನಸಭಾ ಗ್ರಾಮ ಘಟಕದ ಆಶ್ರಯದಲ್ಲಿ ಹಲವು ಬೇಡಿಕೆಗೆ ಒತ್ತಾಯಿಸಿ ತಡೋಳ ಗ್ರಾಪಂ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕಿಸಾನಸಭಾ ರಾಜ್ಯ ಕಾಯಾಧ್ಯಕ್ಷ ಮೌಲಾ ಮುಲ್ಲಾ ಅವರು ಮಾತನಾಡಿ, “ದನದ ಕೊಟ್ಟಗಿ ಕುರಿ ದೋಡ್ಡಿಗಳಿಗೆ ಇರುವ ಅನುದಾನವನ್ನು ಜನವಾರುಗಳ ಆಧಾರದ ಮೇಲೆ ಹೆಚ್ಚಿಸಬೇಕು, ಅಗತ್ಯ ಫಲಾನುಭವಿಗಳನ್ನು ಸೇರಿಸಬೇಕು” ಎಂಬ ಬೇಡಿಕೆಯನ್ನು ಮುಂದಿರಿಸಿದರು. ಅಲ್ಲದೆ, ನಮ್ಮ ಹೊಲ-ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಕಚ್ಚಾ ರಸ್ತೆ ಕಾಮಗಾರಿ ತಕ್ಷಣ ಆರಂಭಿಸುವಂತೆ ಅವರು ಒತ್ತಾಯಿಸಿದರು.

ಹೀಗೆಯೇ, ಕ್ರಿಯಾಯೋಜನೆಯಲ್ಲಿ ರಾಶಿಕಟ್ಟಾ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು, ಪಂಚಾಯತಿಯಲ್ಲಿ ಅನುಮೋದನೆಗೊಂಡ ಕೆಲಸಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಮತ್ತೊಂದು ಪ್ರಮುಖ ಬೇಡಿಕೆ ಎಂದರೆ, ತಡೋಳ ಗ್ರಾಮದಲ್ಲಿನ ಪ್ರಾಥಮಿಕ ಮತ್ತು ಹಿರಿಯ ಪ್ರೌಢಶಾಲೆಗಳಿಗೆ ಹೋಗುವ ರಸ್ತೆ ನಿರ್ಮಾಣದ ಕೆಲಸವನ್ನು ಶೀಘ್ರದಲ್ಲಿ ಆರಂಭಿಸಬೇಕೆಂಬುದಾಗಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡವರು, ಈ ಎಲ್ಲಾ ಕೆಲಸಗಳು ತಕ್ಷಣ ಪ್ರಾರಂಭವಾಗದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿ, ಸ್ಥಳಕ್ಕೆ ಆಗಮಿಸಿದ್ದ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರಿಗೆ ಬೇಡಿಕೆಯ ಮನವಿ ಸಲ್ಲಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ, ಹಾಗೂ ಹಾಲಿ ಸದಸ್ಯ ಮೈಲಾರಿ ಜೋಗೆ, ಪ್ರಗತಿಪರ ರೈತ ಕಲ್ಯಾಣಿ ಅವಟೆ, ಸಿಪಿಐ ಕಾರ್ಯದರ್ಶಿ ಆಶ್ಫಾಕ್ ಮುಲ್ಲಾ, ಕಿಸಾನಸಭಾ ಮುಖಂಡ ಕಮಲೇಶ ಅವಟೆ, ಗಜಾನನ ಅವಟೆ, ತುಕಾರಾಮ ನಕಾತೆ, ವೆಂಕಟ ಪೂಜಾರಿ, ಪ್ರಭಾಕರ್ ಸುತಾರ, ಗೋವಿಂದ ಪೂಜಾರಿ ಸೇರಿದಂತೆ ಮತ್ತಿತರು ಧರಣಿಯಲ್ಲಿ ಭಾಗವಹಿಸಿದ್ದರು.

Join WhatsApp

Join Now

Leave a Comment

error: Content is Protected!