ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ತಡಕಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.

On: August 17, 2025 5:14 PM

ಆಳಂದ: ತಾಲೂಕಿನ ತಡಕಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಇತ್ತೀಚಿಗೆ ಜರುಗಿತು.

ನೇಮಕ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೆ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಜರುಗಿತು.

ಇತ್ತೀಚಿಗೆ ಜರುಗಿದ ಚುನಾವಣೆಯಲ್ಲಿ 12 ನಿರ್ದೇಶಕ ಸ್ಥಾನಗಳಲ್ಲಿ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಬೆಂಬಲಿತ 11 ಜನ ನಿರ್ದೇಶಕರು ಬಹುಮತದಿಂದ ಆಯ್ಕೆಯಾಗಿದ್ದರು.

ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಶಿರೋಳೆ, ಉಪಾಧ್ಯಕ್ಷರಾಗಿ ಅಂಕುಶ ಮೈಂದೆ ಆಯ್ಕೆಯಾದರು. ನಂತರ ವಿಜಯೋತ್ಸದ ಜರುಗಿತು. ವಿಜಯೋತ್ಸವದಲ್ಲಿ ಮುಖಂಡರಾದ ಶಿವಪುತ್ರಪ್ಪ ಬೆಳ್ಳೆ, ತಿಪ್ಪಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಮಾನೋಳೆ, ಅನೀಲ ಜಮಾದಾರ ಸೇರಿದಂತೆ ಪ್ರಮುಖರು ಹಾಗೂ ನೂತನ ನಿರ್ದೇಶಕರು ಭಾಗವಹಿಸಿದ್ದರು.

Join WhatsApp

Join Now

Leave a Comment

error: Content is Protected!