ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಕಲಬುರಗಿಯಲ್ಲಿ ಅಕ್ರಮ ವಾಸವಾಗಿದ್ದ ಸುಡಾನ್ ವಿದ್ಯಾರ್ಥಿ ಪತ್ತೆ: ವಿದೇಶಿಯರ ಬಂಧನ ಕೇಂದ್ರಕ್ಕೆ ಸ್ಥಳಾಂತರ.

On: August 2, 2025 11:40 PM

ಕಲಬುರಗಿ: ನಗರದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ್ದ ಸುಡಾನ್ ಮೂಲದ ವಿದ್ಯಾರ್ಥಿ, ವೀಸಾ ಅವಧಿ ವಿಸ್ತರಣೆ ಮಾಡದೇ ಅಕ್ರಮವಾಗಿ ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಅಬುಸಾಫಿಯಾನ್ ಹೈದಿರ್ ಅಹ್ಮದ್ ಅಲಮೀನ್ ಎಂಬುವನನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ಪೊಲೀಸರು ಹಸ್ತಾಂತರಿಸಿದ್ದಾರೆ.

ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ನೀಡಿದ ಮಾಹಿತಿ ಪ್ರಕಾರ, 2013ರಲ್ಲಿ ಭಾರತಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ಅಬುಸಾಫಿಯಾನ್, ತನ್ನ ವೀಸಾ ಅವಧಿಯನ್ನು 2016ರ ನವೆಂಬರ್ 22ರ ನಂತರ ವಿಸ್ತರಣೆ ಮಾಡದೆ, ಎಂಟು ವರ್ಷಗಳ ಕಾಲ ಕಾನೂನು ಉಲ್ಲಂಘನೆಯಿಂದ ಅಕ್ರಮವಾಗಿ ವಾಸಿಸುತ್ತಿದ್ದನು.

ಈ ಮಾಹಿತಿಯನ್ನು ರಾಜ್ಯ ಗುಪ್ತಚರ ಇಲಾಖೆ ನೀಡಿದ ಹಿನ್ನೆಲೆಯಲ್ಲಿ, ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌.ಡಿ. ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಯಿತು. ಸ್ಟೇಷನ್ ಬಝಾರ್ ಠಾಣೆಯ ಪಿಐ ಶಕೀಲ್ ಅಂಗಡಿ, ಪಿಎಸ್‌ಐ ಇಂದಿರವ್ವ ಹಾಗೂ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆ ಫಲವಾಗಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.

ತನಿಖೆಯ ನಂತರ, ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಯೊಂದಿಗೆ ಸಂಪರ್ಕ ಸಾಧಿಸಿ, ಕಾನೂನಾತ್ಮಕ ಕಾರ್ಯಾಚರಣೆ ಮೂಲಕ ಆತನನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.

ವಿದ್ಯಾಭ್ಯಾಸಕ್ಕಾಗಿ ಬಂದ ವಿದ್ಯಾರ್ಥಿಯೊಬ್ಬನೇ ಅಕ್ರಮ ವಾಸವಾಗಿದ್ದ ಪ್ರಕರಣವು, ದೇಶದ ಆಂತರಿಕ ಭದ್ರತೆ ಮತ್ತು ವಿದೇಶಿಗರ ಮೇಲೆ ನಡೆಯುವ ನಿಯಂತ್ರಣದ ಅಗತ್ಯತೆಯನ್ನು ಮತ್ತೆ ಒತ್ತಿಹೇಳುವಂತಾಗಿದೆ. ಕಲಬುರಗಿ ಪೊಲೀಸ್ ಇಲಾಖೆಯ ಜಾಗ್ರತೆ ಹಾಗೂ ಪ್ರಾಮಾಣಿಕ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

Join WhatsApp

Join Now

Leave a Comment

error: Content is Protected!