374 ರನ್ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ 3ನೇ ದಿನ 50ಕ್ಕೆ1 ವಿಕೆಟ್ ಕಳೆದುಕೊಂಡಿತ್ತು. 4ನೇ ದಿನ ಚೇಸಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡ ಬಹುಬೇಗನೇ ಬೆನ್ ಡಕೆಟ್ ವಿಕೆಟ್ ಕಳೆದುಕೊಂಡಿತು.
ಟೆಸ್ಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ, ಸಚಿನ್ ತೆಂಡೂಲ್ಕರ್ (51), ಜಾಕ್ವೆಸ್ ಕಾಲಿಸ್ (45), ಮತ್ತು ರಿಕಿ ಪಾಂಟಿಂಗ್ (41) ಮಾತ್ರ ಜೋ ರೂಟ್ (39) ಗಿಂತ ಮುಂದಿದ್ದಾರೆ. ಭಾರತದ ವಿರುದ್ಧವೇ ರೂಟ್ 13 ಶತಕ ಸಿಡಿಸಿದ್ದಾರೆ.
ಡಿಪಿಎಲ್ 2025ರ ಎರಡನೇ ಪಂದ್ಯದಲ್ಲಿ, ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಆಡುತ್ತಿರುವ ಧುಲ್, ನಾರ್ದರ್ನ್ ದೆಹಲಿ ಸ್ಟ್ರೈಕರ್ಸ್ ವಿರುದ್ಧ 56 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಬೃಹತ್ ಸಿಕ್ಸರ್ಗಳ ಸಹಾಯದಿಂದ ಅಜೇಯ 101 ರನ್ ಗಳಿಸಿದರು. ಪರಿಣಾಮವಾಗಿ, ಸೆಂಟ್ರಲ್ ದೆಹಲಿ 8 ವಿಕೆಟ್ಗಳ ಬೃಹತ್ ಅಂತರದಿಂದ ಗೆದ್ದಿತು.
ಮಹೇಂದ್ರ ಸಿಂಗ್ ಧೋನಿ, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2008ರಿಂದ 2023ರವರೆಗೆ (2016 ಮತ್ತು 2017ರಲ್ಲಿ ತಂಡದ ಮೇಲಿನ ನಿಷೇಧವನ್ನು ಹೊರತುಪಡಿಸಿ) ನಾಯಕತ್ವದಲ್ಲಿ ಮುನ್ನಡೆಸಿದ್ದಾರೆ.
ಭಾರತದ 90 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಸರಣಿಯಲ್ಲಿ ಮೂರು ಬ್ಯಾಟರ್ಗಳು 500ರ ಗಡಿದಾಟಿರುವುದು ಇದೇ ಮೊದಲಾಗಿದೆ. 1934ರಿಂದ ಇಲ್ಲಿಯವರೆಗೆ ಭಾರತದ ಸಚಿನ್, ದ್ರಾವಿಡ್, ಗಂಗೂಲಿ ಹಾಗೂ ಸೆಹ್ವಾಗ್ ರಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಒಂದೇ ಒಂದು ಸರಣಿಯಲ್ಲಿ ಮೂವರು ಈ ದಾಖಲೆ ನಿರ್ಮಿಸಲು ಆಗಿರಲಿಲ್ಲ.
196 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಚಾಂಪಿಯನ್ಸ್ ಪವರ್ ಪ್ಲೇನಲ್ಲಿ 72 ರನ್ಗಳಿಸಿತು. ಆದರೆ 6ನೇ ಓವರ್ನ ಕೊನೆಯ ಹಾಶಿಮ್ ಆಮ್ಲಾ ಕೇವಲ 18 ರನ್ಗಳಿಗೆ ಔಟ್ ಆದರು.
ಈ ಸರಣಿಯಲ್ಲಿ ಭಾರತ ಹೋರಾಡಿದ ರೀತಿ ನನ್ನನ್ನು ಪ್ರಭಾವಿತಗೊಳಿಸಿದೆ. ಮೊದಲ ಟೆಸ್ಟ್ ಸೋಲಿನ ನಂತರ ಭಾರತ ಚೇತರಿಸಿಕೊಳ್ಳುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ಭಾರತ ತಮ್ಮ ಆಟದೊಂದಿಗೆ ತಾವೂ ಎಷ್ಟು ಕಠಿಣ ತಂಡ ಎಂಬುದನ್ನು ತೋರಿಸಿದೆ ಎಂದು ನಾಸೆರ್ ತಿಳಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರು ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 6 ಬಾರಿ 50+ ಸ್ಕೋರ್ಗಳನ್ನು ಗಳಿಸಿದ ಆಟಗಾರನಿಗೆ ಜಡ್ಡು ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದಕ್ಕೂ ಮೊದಲು, ಈ ದಾಖಲೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಗ್ಯಾರಿ ಸೋಬರ್ಸ್ ಹೆಸರಿನಲ್ಲಿತ್ತು.
ಭಾರತ ತಂಡದ ಮೊದಲ ಇನ್ನಿಂಗ್ಸ್ನಲ್ಲಿ 23 ರನ್ಗಳ ಹಿನ್ನಡೆ ಅನುಭವಿಸಿದರು, 2ನೇ ಇನ್ನಿಂಗ್ಸ್ನಲ್ಲಿ ಕೆಚ್ಚೆದೆಯ ಪ್ರದರ್ಶನ ತೋರಿ 396 ರನ್ಗಳಿಸಿತು. 3ನೇ ದಿನ ಭಾರತ ತಂಡ ಯಶಸ್ವಿ ಜೈಸ್ವಾಲ್ ಶತಕ ಹಾಗೂ ಆಕಾಶ್ ದೀಪ್ ಹಾಗೂ ವಾಷಿಂಗ್ಟನ್ ಸುಂದರ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಗೆಲ್ಲಲು 374 ರನ್ಗಳ ಕಠಿಣ ಗುರಿ ನೀಡುವಲ್ಲಿ ಸಫಲವಾಗಿದೆ
ಪೂರ್ವ ವಲಯದ ತಂಡವು ಅನುಭವಿ ಮತ್ತು ಯುವ ಆಟಗಾರರ ಮಿಶ್ರಣವನ್ನು ಒಳಗೊಂಡಿದೆ. ಇಶಾನ್ ಕಿಶನ್, ಇತ್ತೀಚೆಗೆ ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ನಲ್ಲಿ ನಾಟಿಂಗ್ಹ್ಯಾಮ್ಶೈರ್ಗಾಗಿ ಎರಡು ಅರ್ಧಶತಕಗಳನ್ನು ಗಳಿಸಿ ಉತ್ತಮ ಫಾರ್ಮ್ನಲ್ಲಿದ್ದಾರೆ.
ಈ ಸರಣಿಯ ನಂತರ, ಟೀಮ್ ಇಂಡಿಯಾದ ಆಟಗಾರರಿಗೆ ಸುಮಾರು 35 ದಿನಗಳ ವಿಶ್ರಾಂತಿ ಸಿಗುತ್ತದೆ. ವಾಸ್ತವವಾಗಿ, ಈ ಸರಣಿಯ ನಂತರ, ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸಕ್ಕೆ ಹೋಗಬೇಕಿತ್ತು. ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ಇರಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿನ ಕೆಟ್ಟ ಪರಿಸ್ಥಿತಿಯಿಂದಾಗಿ, ಈ ಪ್ರವಾಸವನ್ನು ಮುಂದೂಡಲಾಗಿದೆ.
ಶನಿವಾರ ನಡೆಯಲಿರುವ ಡಬ್ಲ್ಯುಸಿಎಲ್-2025ರ ಫೈನಲ್ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡವು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೆಲಿಯಾ ಚಾಂಪಿಯನ್ಸ್ ವಿರುದ್ಧ 1 ರನ್ ರೋಚಕ ಜಯ ಸಾಧಿಸಿ ಫೈನಲ್ ತಲುಪಿದೆ. ಶನಿವಾರ ಫೈನಲ್ ಪಂದ್ಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿದೆ.
ಲಂಡನ್ನ ಓವಲ್ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಭಾರತ-ಇಂಗ್ಲೆಂಡ್ (India vs England) ಟೆಸ್ಟ್ ಸರಣಿಯ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಗಮನ ಸೆಳೆದರು.
ಆಕಾಶ್ ದೀಪ್, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 50 ರನ್ಗಳ ಮೈಲಿಗಲ್ಲನ್ನು ತಲುಪಿದರು. ಈ ಇನಿಂಗ್ಸ್ನಲ್ಲಿ ಅವರು 7 ಬೌಂಡರಿಗಳನ್ನು (6 ಫೋರ್, 1 ಸಿಕ್ಸರ್) ಬಾರಿಸಿದರು, ಇದು ಇಂಗ್ಲೆಂಡ್ನ ಬೌಲರ್ಗಳಿಗೆ ತೀವ್ರ ಸವಾಲನ್ನು ಒಡ್ಡಿತು.
ಮಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ನಲ್ಲಿ, ಯಶಸ್ವಿ ಜೈಸ್ವಾಲ್ ಕೇವಲ 44 ಎಸೆತಗಳಲ್ಲಿ 50* ರನ್ಗಳನ್ನು ಗಳಿಸಿದರು. ಈ ಇನಿಂಗ್ಸ್ನೊಂದಿಗೆ, 23 ವರ್ಷದೊಳಗಿನ ಭಾರತೀಯ ಆಟಗಾರರಿಗೆ ಇಂಗ್ಲೆಂಡ್ ವಿರುದ್ಧ ಅತೀ ಹೆಚ್ಚು 50+ ಸ್ಕೋರ್ಗಳ (9 50+ ಸ್ಕೋರ್ಗಳು: 3 ಶತಕಗಳು, 6 ಅರ್ಧಶತಕಗಳು) ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಭಾರತ ಎರಡನೇ ದಿನದಾಟವನ್ನು 2 ವಿಕೆಟ್ಗೆ 75 ರನ್ಗಳೊಂದಿಗೆ ಮುಗಿಸಿತು. ಪ್ರಸ್ತುತ ಅವರು 52 ರನ್ಗಳ ಮುನ್ನಡೆಯಲ್ಲಿದ್ದಾರೆ. ಜೈಸ್ವಾಲ್ (51 ಬ್ಯಾಟಿಂಗ್; 7 ಬೌಂಡರಿ, 2 ಸಿಕ್ಸರ್) ಮತ್ತು ಆಕಾಶ್ ದೀಪ್ (4 ಬ್ಯಾಟಿಂಗ್) ಕ್ರೀಸ್ನಲ್ಲಿದ್ದಾರೆ. ಮೂರನೇ ದಿನದಂದು ಟೀಮ್ ಇಂಡಿಯಾ ಗೆಲ್ಲಲು ಯಾವ ತಂತ್ರಗಳನ್ನು ಜಾರಿಗೆ ತರಬೇಕು ಎಂದು ಈಗ ನೋಡೋಣ.
ಭಾರತ ತಂಡದ ವೇಗಿಗಳು ತಿರುಗೇಟಿಗೆ ನಲುಗಿದ ಇಂಗ್ಲೆಂಟ್ 5ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 247ಕ್ಕೆ ಆಲೌಟ್ ಆಗಿದೆ. ಜ್ಯಾಕ್ ಕ್ರಾಲಿ (64), ಹ್ಯಾರಿ ಬ್ರೂಕ್ (53) ಹಾಗೂ ಬೆನ್ ಡಕೆಟ್ 43 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.