ಆಳಂದ: ತಾಲೂಕಿನ ಕೋತನ ಹಿಪ್ಪರಗಾ ಗ್ರಾಮದಲ್ಲಿ ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಮಹದೇವಲಿಂಗ ದೇವಸ್ಥಾನದ 28ನೇ ವರ್ಷದ ಭಜನಾ ಮಹಾಮಂಗಳ ಕಾರ್ಯಕ್ರಮ ಸಂಭ್ರಮದ ಮಧ್ಯ ದುರಿಯಾಗಿ ಜರುಗಿತು.
ಸಮಾರಂಬವನ್ನು ಉದ್ಘಾಟಿಸಿದ ಹಾಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, “ಈ ಭಜನಾ ಮಹಾಮಂಗಳ ಕಾರ್ಯಕ್ರಮವು ಗ್ರಾಮದ ಜನರ ಸಾಮರಸ್ಯ ಮತ್ತು ಧಾರ್ಮಿಕ ಭಾವನೆಯನ್ನು ಬೆಳೆಸುವ ಉದ್ದೇಶದಿಂದ 28 ವರ್ಷಗಳಿಂದ ನಡೆಯುತ್ತಿದೆ. ಶ್ರೀ ಮಹದೇವಲಿಂಗದೇವರ ಆಶೀರ್ವಾದದಿಂದ ಈ ಗ್ರಾಮವು ಶಾಂತಿ ಮತ್ತು ಸೌಭಾಗ್ಯವನ್ನು ಪಡೆದುಕೊಂಡಿದೆ. ಆದರೆ ಇಂದಿನ ಯುವಕರು ದುಷ್ಟ ಚಟಕೆಗಳ ಬಲಿಯಾಗುತ್ತಿದ್ದಾರೆ. ಸಾರಾಯಿ ಡ್ರಗ್ಸ್, ಅಪರಾಧ ಮತ್ತು ಕೆಟ್ಟ ಸಹವಾಸಗಳಿಂದ ದೂರ ಉಳಿಯುವುದು ಮುಖ್ಯ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವ ಜನಾಂಗವು ಸರಿಯಾದ ಮಾರ್ಗದರ್ಶನ ಪಡೆಯಬೇಕು. ಈ ಕಾರ್ಯಕ್ರಮವು ಎಲ್ಲರಿಗೂ ಏಕತೆ ಮತ್ತು ಸೌಭಾಗ್ಯ ತರಲಿ ಎಂದು ಆಶಿಸುತ್ತೇನೆ” ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಮಾತನಾಡಿ, “ಗ್ರಾಮದಲ್ಲಿ ಸಾಮರಸ್ಯವೇ ಇದ್ದರೆ 28 ವರ್ಷಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಶ್ರೀಗಳ ಆಶೀರ್ವಾದದಿಂದ ಇದು ಮುಂದುವರಿದಿದೆ. ಆದರೆ ಇಂದಿನ ಯುವಕರು ದುಷ್ಟ ಚಟಕೆಗಳಿಗೆ ಬಲಿಯಾಗುತ್ತಿದ್ದಾರೆ. ಅವರು ಸರಿಯಾದ ಮಾರ್ಗದಲ್ಲಿ ನಡೆಯಬೇಕು” ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಅಸುಭಾಷೆ ಮುರುಡ್ ಮತ್ತು ಇತರರು ಸಾಮರಸ್ಯ ಮತ್ತು ಧಾರ್ಮಿಕತೆಯ ಮಹತ್ವದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಅಸುಭಾಷೆ ಮುರುಡ್, ವೇದ ಮೂರ್ತಿ ಬಸಯ್ಯ ಸ್ವಾಮಿ, ಶಿವಪುಜಪ್ಪ ಇಸ್ರಾಜಿ, ನ್ಯಾಯವಾದಿ ದಿಲೀಪ್ ಕ್ಷೀರ್ ಸಾಗರ, ರಾಜೇಂದ್ರ ಸಾಲೇಗಾoವ್, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಸೇರಿದಂತೆ ಅನೇಕ ಮುಖ್ಯ ಅತಿಥಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಭಜನೆ ತಂಡಗಳು ಭಾಗವಹಿಸಿ ಭಜನೆ ಕೈಗೊಂಡ ಬೆಳಗಿನ ಜಾವ ಮಹದೇವ ಲಿಂಗಕ್ಕೆ ಪೂಜೆಗಳು ಮತ್ತು ಆಶೀರ್ವಚನಗಳು ನಡೆದು, ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದರು.









