ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

೧೩ನೇ ಶ್ರಾವಣಸಂಜೆ ಉಪನ್ಯಾಸ ಕಾರ್ಯಕ್ರಮ ಸಮಾರೋಪ ಆಗಸ್ಟ್ ೨೪ರಂದು.

On: August 22, 2025 8:39 PM

ಆಳಂದ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕವು ಹಮ್ಮಿಕೊಂಡ ೧೩ನೇ ವರ್ಷದ ಶ್ರಾವಣಸಂಜೆ ಉಪನ್ಯಾಸ ಕಾರ್ಯಕ್ರಮದ ಸಮಾರೋಪವು ಆಗಸ್ಟ್ ೨೪ರಂದು ಬೆಳಿಗ್ಗೆ ೧೦:೩೦ಕ್ಕೆ ಜರುಗಲಿದೆ ಎಂದು ಕಾರ್ಯದರ್ಶಿ ರಾಮಣ್ಣಾ ಸುತಾರ ತಿಳಿಸಿದರು.

ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಬೆಂಗಳೂರಿನ ಬಿಬಿಎಂಪಿ ಸಹಾಯಕ ಆಯುಕ್ತ (ಚುನಾವಣೆ) ಬಿ. ಶರಣಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ. ಆರ್. ಪಾಟೀಲ, ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರ. ಪರಿಷತ್ತಿ ತಾಲ್ಲೂಕಾಧ್ಯಕ್ಷ ಸಂಜಯ್ ಎಸ್. ಪಾಟೀಲ ಅಧ್ಯಕ್ಷತೆವಹಿಸಲಿದ್ದಾರೆ.

ಕಳೆದ ಜುಲೈ ೨೫ರಿಂದ ನಿರಂತರ ಶರಣರ ಚಿಂತನೆಗಳ ಕುರಿತು ಉಪನ್ಯಾಸಗಳು ಏರ್ಪಡಿಸಲಾಗಿತ್ತು. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಚನಗಾಯನ, ವಚನ ಕಂಠಪಾಠ, ವಚನ ರಸಪ್ರಶ್ನೆ ಹಾಗೂ ಶರಣರ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಯು ನಡೆಯಲಿದೆ. ಅಪ್ಪಾ ಸಾಹೇಬ ತೀರ್ಥ, ಮಲ್ಲಿನಾಥ ವಚ್, ಸಂತೋಷ ವೇದಪಾಠಕ, ವೈಶಾಲಿ ಪಾಟೀಲ ಉಪಸ್ಥಿತರಿದ್ದರು.

Join WhatsApp

Join Now

Leave a Comment

error: Content is Protected!