ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆರ್.ಕೆ. ಪಾಟೀಲರ ಪಾದಯಾತ್ರೆ: ಸರ್ಕಾರಿ ಅಧಿಕಾರಿಗಳ ದುರುಪಯೋಗ ಮತ್ತು ರಾಜಕೀಯ ಒತ್ತಡದ ಆರೋಪ, ಆಳಂದ ಬಿಜೆಪಿ ಕಟು ಟೀಕೆ.

On: October 23, 2025 6:08 PM

ಆಳಂದ: ಶಾಸಕ ಬಿ.ಆರ್. ಪಾಟೀಲ ಮಾರ್ಗದರ್ಶನದಲ್ಲಿ, ಆರ್.ಕೆ. ಪಾಟೀಲ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಅಕ್ಟೋಬರ್ 24ರಿಂದ 31ರವರೆಗೆ ನಡೆಯುತ್ತಿರುವ “ಗಾಂಧಿ ತತ್ವಗಳ ಪ್ರಸಾರ” ಹೆಸರಿನ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದೆ ಎಂದು ಆಳಂದ ಬಿಜೆಪಿ ಬಲವಾಗಿ ವಿರೋಧಿಸಿದೆ.

ಪಾದಯಾತ್ರೆ ಖಾಸಗಿ ಕಾರ್ಯಕ್ರಮವಾಗಿದ್ದರೂ ಸರ್ಕಾರದ ಹೆಸರು ಮತ್ತು ಲಾಂಛನವನ್ನು ಬಳಸಿಕೊಂಡು ಶಿಷ್ಟಾಚಾರ ಪಾಲನೆಗಾಗಿ ಗ್ರಾಮ ಪಂಚಾಯತ್‌ಗಳಿಗೆ ಇ.ಒ. ಮೂಲಕ ನೋಟಿಸ್ ನೀಡಿರುವುದರಿಂದ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಮುಖಂಡ ಹಾಗೂ ಮಂಡಲ ಮಾಜಿ ಅಧ್ಯಕ್ಷ ಆನಂದರಾವ್ ಪಾಟೀಲ ಕೊರಳ್ಳಿ, ಬಾಬಾಸಾಹೇಬ ಪಾಟೀಲ, ಶ್ರೀಮಂತ ಸಾರವಾಡ, ಬಾಬುರಾವ್ ಸರಡಗಿ, ಪ್ರಕಾಶ್ ತೋಳೆ ಹಾಗೂ ಪಿಂಟು ಝಳಕಿ ಸೇರಿದಂತೆ ಹಲವರು ಮಾತನಾಡಿದರು.

ಕಳೆದ ಒಂದು ವಾರದಿಂದ ಖಜೂರಿಯಲ್ಲಿ ಆರ್‍ಎಸ್‍ಎಸ್ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಕೇಳಿಕೊಂಡರೂ ಅನುಮತಿ ದೊರೆಯಲಿಲ್ಲ. ಪಾದಯಾತ್ರೆಗೆ ಅನುಮತಿ ಸಿಕ್ಕಿದೆಯೇ ಎಂದು ಪ್ರಶ್ನಿಸಿದ ಅವರು, ತಾಲ್ಲೂಕಿನ ಇ.ಒ. ಅವರು “ಕರ್ನಾಟಕ ಸರ್ಕಾರ”, “ಜಿಪಂ” ಹಾಗೂ “ತಾಪಂ ಆಳಂದ” ಹೆಸರಿನಲ್ಲಿ ಪತ್ರ ಹೊರಡಿಸಿ ಆಯ್ದ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸ್ವಚ್ಛತಾ ಕಾರ್ಯ, ಸಭೆ ವ್ಯವಸ್ಥೆ ಮತ್ತು ಪಾದಯಾತ್ರೆ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಗಾಗಿ ಆದೇಶ ನೀಡಿದ್ದಾರೆ. ಆದರೆ ಈ ಆದೇಶವು ಶಾಸಕರ ಖಾಸಗಿ ರಾಜಕೀಯ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳನ್ನು ಬಳಸುವ ಪ್ರಯತ್ನ ಎಂದು ಅವರು ಟೀಕೆ ಮಾಡಿದರು.

ಇದೇ ವೇಳೆ, ಶಾಸಕರ ಕಾರ್ಯಾಲಯದ ಹೆಸರಿನಲ್ಲಿ ಕಾರ್ಯದರ್ಶಿ (ಮೊಬೈಲ್ ಸಂಖ್ಯೆ 9449986059) ಸರ್ಕಾರಿ ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡಿ, ಪಾದಯಾತ್ರೆಗೆ ಸಿಬ್ಬಂದಿ ಹಾಗೂ ಪಂಚಾಯತ್ ಸಂಪನ್ಮೂಲಗಳನ್ನು ಬಳಸಲು ಒತ್ತಡ ಹೇರಿದ್ದಾನೆ ಎಂದು ಆರೋಪಿಸಿದರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಶಾಸಕ ಬಿ.ಆರ್. ಪಾಟೀಲರ ಅಣ್ಣನ ಮಗ ಹಾಗೂ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಅವರು ಶಾಸಕರಲ್ಲದಿದ್ದರೂ ಸರ್ಕಾರದ ಯೋಜನೆಗಳ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಮೂಲಕ ಬೀಜ ಹಾಗೂ ಸ್ಪ್ರಿಂಕ್ಲರ್ ಪೈಪು ವಿತರಿಸುತ್ತಿರುವುದಾಗಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮ ಪಂಚಾಯತ್ ಸಿಬ್ಬಂದಿಯ ಮೇಲೆ ರಾಜಕೀಯ ಒತ್ತಡ ಹೇರಿದ ಖಾಸಗಿ ವ್ಯಕ್ತಿ ಶರಣಬಸಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗದಿದ್ದರೆ, ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಎಚ್ಚರಿಸಿದ್ದಾರೆ.

ಗುತ್ತೇದಾರ ಕಟ್ಟಡಗಳ ಮೇಲೆ ಅನಧಿಕೃತ ಡ್ರೋನ್ ಹಾರಾಟ – ಪ್ರಕರಣ ದಾಖಲಿಸಲು ಒತ್ತಾಯ.

ಆಳಂದ ಪಟ್ಟಣದ ಹೊರವಲಯದಲ್ಲಿರುವ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ಶಿಕ್ಷಣ ಸಂಸ್ಥೆಯ ಕಟ್ಟಡಗಳ ಮೇಲೆ ಮೂರು ದಿನಗಳಿಂದ ಅನಧಿಕೃತವಾಗಿ ಡ್ರೋನ್ ಕ್ಯಾಮೆರಾ ಹಾರಾಟ ನಡೆಸಿ, ಶಾಸಕರ ರಾಜಕೀಯ ಹಗೆತನ ಸಾಧಿಸಲು ಹೋರಟಿದ್ದಾರೆ ಎಂದು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಯುವ ಮುಖಂಡ ಆನಂದರಾವ್ ಪಾಟೀಲ ಕೊರಳ್ಳಿ ಖಂಡಿಸಿದ್ದಾರೆ.

“ಶಾಸಕ ಬಿ.ಆರ್. ಪಾಟೀಲ ಹಾಗೂ ಅವರ ಅಣ್ಣನ ಮಗ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ರಾಜಕೀಯ ಹಗೆತನದಿಂದ ಈ ಅನಧಿಕೃತ ಡ್ರೋನ್ ಹಾರಾಟ ನಡೆಸಿದ್ದಾರೆ” ಎಂದು ಆರೋಪಿಸಿದರು. ಈ ಡ್ರೋನ್ ಗುತ್ತೇದಾರರ ಶಿಕ್ಷಣ ಸಂಸ್ಥೆಯ ಕಟ್ಟಡಗಳ ಮೇಲೆ ಹಾರಾಡಿ, ನಂತರ ಶಾಸಕರ ಶಿಕ್ಷಣ ಸಂಸ್ಥೆಯಲ್ಲಿಯೇ ಇರುವ ಸಂಪರ್ಕ ಕಚೇರಿಯ ಪ್ರದೇಶದಲ್ಲಿ ಲ್ಯಾಂಡ್ ಆಗಿರುವುದು ಗಮನಕ್ಕೆ ಬಂದಿದೆ.

ಡ್ರೋನ್ ಕಾಯಿದೆ 2021ರ ಪ್ರಕಾರ ಯಾವುದೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವ ರೀತಿಯ ಚಿತ್ರೀಕರಣ ಮಾಡುವುದು ನಿಷಿದ್ಧವಾಗಿದೆ. ಅದೇ ರೀತಿ 2023ರ ನಿಯಮಾನುಸಾರ ದುರುದ್ದೇಶದಿಂದ ಗೋಢಚರ್ಯ ನಡೆಸುವುದು ಕ್ರಿಮಿನಲ್ ಅಪರಾಧಕ್ಕೆ ಸಮಾನವಾಗಿದೆ. ಐಟಿ ಕಾಯಿದೆ 2000ರ ಪ್ರಕಾರ ಸೆಕ್ಷನ್ 43 ಅಥವಾ 66 ಅಡಿ ಈ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!