ಮಂಗಳೂರು: ರಾಜ್ಯದಾದ್ಯಂತ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾದ ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹತ್ವದ ಹೆಜ್ಜೆ ಇಡಿದ್ದು, ಸಾರ್ವಜನಿಕರ ಸಹಕಾರವನ್ನು ಪಡೆಯಲು ಸಹಾಯವಾಣಿಯನ್ನು ಸ್ಥಾಪಿಸಿದೆ.
ಪ್ರಕರಣದ ಗಂಭೀರತೆ ಮತ್ತು ನಿಜಾಂಶ ಅನಾವರಣಕ್ಕೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುವ ಅಗತ್ಯತೆ ಹಿನ್ನೆಲೆಯಲ್ಲಿ, ಮಂಗಳೂರು ನಗರದ ಕದ್ರಿ ಭಾಗದ ಮಲ್ಲಿಕಟ್ಟೆಯಲ್ಲಿ ಇರುವ ನಿರೀಕ್ಷಣ ಮಂದಿರದಲ್ಲಿ ಎಸ್‌ಐಟಿ ತನ್ನ ಕಚೇರಿಯನ್ನು ಸ್ಥಾಪಿಸಿದೆ. ಸಾರ್ವಜನಿಕರು, ಬಾಧಿತರು ಅಥವಾ ಅವರ ಕುಟುಂಬಸ್ಥರು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಈ ಕಚೇರಿಗೆ ಸಂಪರ್ಕಿಸಬಹುದು.
ಎಸ್‌ಐಟಿ ಕಚೇರಿ ವಿವರಗಳು ಹೀಗಿವೆ:📍
ವಿಳಾಸ: ನಿರೀಕ್ಷಣ ಮಂದಿರ, ಮಲ್ಲಿಕಟ್ಟೆ, ಕದ್ರಿ, ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ.
📞 ಲ್ಯಾಂಡ್‌ಲೈನ್: 0824-2005301
📱 ವಾಟ್ಸಾಪ್ ಸಂಖ್ಯೆ: 8277986369
📧 ಇಮೇಲ್ ಐಡಿ: sitdps@ksp.gov.in
🕙 ಸಂಪರ್ಕ ಸಮಯ: ಪ್ರತಿದಿನ ಬೆಳಿಗ್ಗೆ 10:00 ರಿಂದ ಸಂಜೆ 5:00
ಎಸ್‌ಐಟಿ ಅಧಿಕಾರಿಗಳ ಪ್ರಕಾರ, ಈ ಸಹಾಯವಾಣಿ ಕೇವಲ ದೂರುಗಳಿಗಾಗಿ ಮಾತ್ರವಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಉಪಯುಕ್ತ ಮಾಹಿತಿಯನ್ನು ನೀಡಲು ಸಹ ವೇದಿಕೆಯಾಗಲಿದೆ. ಸಾರ್ವಜನಿಕರು ನಿರ್ಭೀತಿಯಾಗಿ, ಯಾವುದೇ ಒತ್ತಡ ಅಥವಾ ಭೀತಿಯಿಂದ ದೂರವಿದ್ದು, ತನಿಖೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ನಿಮ್ಮ ಮಾಹಿತಿ ಗೋಪ್ಯವಾಗಿರುತ್ತದೆ”
ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿರುವುದೇನೆಂದರೆ, ಸಾರ್ವಜನಿಕರಿಂದ ಒದಗಿಸಲ್ಪಡುವ ಎಲ್ಲ ಮಾಹಿತಿಯು ಸಂಪೂರ್ಣ ಗೋಪ್ಯವಾಗಿರಲಿದೆ. ಯಾವುದೇ ವ್ಯಕ್ತಿಗತ ಮಾಹಿತಿ ಬಹಿರಂಗವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಇದು, ಹೆಚ್ಚು ಹೆಚ್ಚು ನಾಗರಿಕರು ಮುನ್ನಡೆಯುವಂತೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ.
ತನಿಖೆಗೆ ವೇಗ – ನ್ಯಾಯಕ್ಕಾಗಿ ಸಹಕಾರ: ಪ್ರಸ್ತುತ ತನಿಖೆ ಭರದಿಂದ ಸಾಗುತ್ತಿರುವಂತೆಯೇ, ಈ ಸಹಾಯವಾಣಿಯ ಸ್ಥಾಪನೆಯು ತನಿಖಾ ಪ್ರಗತಿಗೆ ಹೊಸ ಉತ್ತೇಜನ ನೀಡಲಿದೆ. ನ್ಯಾಯ ದೊರಕಿಸಬೇಕಾದವರು ಅನೇಕರು – ಹಾಗೂ ಅವರ ತೊಂದರೆಗಳಿಗೆ ಸ್ಪಂದಿಸುವ ಸಕ್ರಿಯ ಕ್ರಮವಿದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯ ನಾಗರಿಕರಿಂದ ಹಿಡಿದು ಪ್ರಕರಣದ ಬಗ್ಗೆ ಯಾವುದೇ ಮಾದರಿಯ ಮಾಹಿತಿ ಹೊಂದಿರುವ ಎಲ್ಲರೂ ಮುಂದೆ ಬಂದು ಸಹಕರಿಸಿದರೆ, ಸಮಾಜದಲ್ಲಿ ನ್ಯಾಯ ಮತ್ತು ನೈತಿಕತೆ ಇನ್ನಷ್ಟು ಬಲವಾಗುತ್ತವೆ. ಧರ್ಮಸ್ಥಳ ಪ್ರಕರಣದಲ್ಲಿ ಸತ್ಯದ ಬೆಳಕು ಹರಿಯಲಿ ಎಂಬ ಆಶಯ ಎಲ್ಲರಲ್ಲೂ ಮೂಡಿರಬೇಕು.
ಸಾಮಾಜಿಕ ಜವಾಬ್ದಾರಿಯ ದೃಷ್ಟಿಯಿಂದ, ಈ ಮಾಹಿತಿಯನ್ನು ಹೆಚ್ಚಿನವರಿಗೆ ತಲುಪಿಸಲು ಎಲ್ಲರೂ ಪಾಲ್ಗೊಳ್ಳಬೇಕು. ನಿಮ್ಮ ಚಿಕ್ಕ ಸಹಕಾರವೂ ದೊಡ್ಡ ನಯಾಯಕತ್ತೆಗೆ ದಾರಿ ತೆರೆದುಬಿಡಬಹುದು.