ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಿರ್ಲಕ್ಷ್ಯ – ಆಡಳಿತ ಕಚೇರಿ ವೇಳೆಯಲ್ಲೇ ಅಧಿಕಾರಿಗಳ ಗೈರುಹಾಜರಿ, ಇಬ್ಬರು ಕ್ಲರ್ಕ್‌ಗಳಷ್ಟೇ ಕಾರ್ಯನಿರ್ವಹಣೆ.

On: October 28, 2025 8:40 PM

ಆಳಂದ: ತಾಲೂಕು ಪಂಚಾಯಿತಿ ಕಚೇರಿಯು ಮಂಗಳವಾರ ಬೆಳಿಗ್ಗೆ ೧೧ ಗಂಟೆಯಾದರೂ ಸಂಪೂರ್ಣ ಬಿಕೋ ಎನಿಸಿತು. ಕಚೇರಿಯೊಳಗೆ ಕೇವಲ ಇಬ್ಬರು ಕ್ಲರ್ಕ್‌ಗಳು ಕಾರ್ಯನಿರ್ವಹಿಸುತ್ತಿದ್ದರೆ, ಇತರ ಅಧಿಕಾರಿಗಳು ಯಾರೂ ಹಾಜರಿರಲಿಲ್ಲ. ಕಚೇರಿಯೊಳಗೆ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವು ಆಳಿಕೊಂಡಿದ್ದು, ಜನಸಾಮಾನ್ಯರ ಕೆಲಸಗಳು ನಿಂತು ಹೋಗುವ ಪರಿಸ್ಥಿತಿ ಉಂಟಾಗಿದೆ.

ತಾಲೂಕಿನ ವಿವಿಧ ಶಾಖೆಗಳಲ್ಲಿಯೂ ಇದೇ ದೃಶ್ಯ ಕಂಡುಬರುತ್ತಿದ್ದು, ಅಧಿಕಾರಿಗಳ ಲಗಾಮಿಲ್ಲದ ಆಡಳಿತ ಕ್ರಮೇಣ ರೂಢಿಯಾಗಿದೆ. ಕೆಲವರು ಹಾಜರಾಗಿದರೂ ಕೇವಲ ಕಾಟಾಚಾರಕ್ಕಾಗಿ ಬಂದು ತೆರಳುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕೆಲಸಕ್ಕೆ ಕರೆಯಬೇಡಿ, ಊಟಕ್ಕೆ ಮರೆಯಬೇಡಿ” ಎಂಬ ನುಡಿಯಂತೆ, ಅಧಿಕಾರಿಗಳು ಸಂಬಳಕ್ಕಾಗಿ ಮಾತ್ರ ಕಚೇರಿಯ ಹೆಸರು ಉಳಿಸಿಕೊಂಡಿರುವಂತಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಶಿಸ್ತಿನ ಕೊರತೆ ಗೋಚರಿಸುತ್ತಿದ್ದು, ಇದರಿಂದ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ಕರ್ತವ್ಯಲೋಪ ತೋರಿಸುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವುದು ಅಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಪ್ರತಿಕ್ರಿಯೆ ನೀಡುತ್ತಾ, “ನಾನು ಗಣತಿ ಕರ್ತವ್ಯದಿಂದ ಹೊರಗಡೆ ಇದ್ದೆ. ಕಚೇರಿಯಲ್ಲಿ ಸಿಬ್ಬಂದಿಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು.

Join WhatsApp

Join Now

Leave a Comment

error: Content is Protected!