ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಬೇಡಿಕೆಗೆ ಒತ್ತಾಯಿಸಿ ನಿಂಬರಗಾದಲ್ಲಿ ಬಿರುಸಿನ ಪ್ರತಿಭಟನೆ.

On: August 26, 2025 6:19 PM

ಆಳಂದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಂಜಾರಾ ಕ್ರಾಂತಿ ದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ ಅವರ ನೇತೃತ್ವದಲ್ಲಿ ತಾಲೂಕಿನ ಹೋಬಳಿ ಕೇಂದ್ರ ನಿಂಬರಗಾ ಗ್ರಾಮದ ಬಸ್ ನಿಲ್ದಾಣ ಮೇಲೆ ಕಾರ್ಯಕರ್ತರು ಮತ್ತು ಬೆಂಬಲಿತ ಮುಖಂಡರು ಪ್ರತಿಭಟನೆ ಕೈಗೊಂಡು ಆಡಳಿತವನ್ನು ಒತ್ತಾಯಿಸಿದರು.

ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿದ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು, ನಿಂಬರಗಾ ಗ್ರಾಮದಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿದ್ದು ಇದರ ಕುರಿತು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆರೋಪಿಸಿದರು. ಜನರ ಮೂಲಭೂತ ಸಮಸ್ಯೆಗಳು ಈಡೇರಿಸುವಲ್ಲಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬಿರುಸಿನ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಈ ಬೇಡಿಕೆಗಳನ್ನು ಆದ್ಯತೆಯ ಮೇಲೆ ಬಗೆಹರಿಸದಿದ್ದರೆ ನಾಗರಿಕರೊಂದಿಗೆ ತಹಸೀಲ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬಂಜಾರಾ ಕ್ರಾಂತಿ ದಳ ರಾಜ್ಯ ಅಧ್ಯಕ್ಷ ರಾಜು ಚವ್ಹಾಣ ಮಾತನಾಡಿ, ನಿಂಬರಗಾ ವಾರ್ಡ ನಂ.1ರ ಮೌಲಾ ನಗರದ ಚರಂಡಿ ಸಮಸ್ಯೆ, ನಿಂಬರ್ಗಾ ತಾಂಡಾದಿಂದ ಬಸವಂತವಾಡಿ ರಸ್ತೆ ಸಂಪರ್ಕ, ಬಿಸಿಎಮ್ ವಸತಿ ನಿಲಯಕ್ಕೆ ಹೋಗಲು ರಸ್ತೆ, ನಾಡ ಕಚೇರಿ ಕಟ್ಟಡ ನಿರ್ಮಾಣ, ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪರಿಹಾರ, ನಿಂಬರ್ಗಾ ಗ್ರಾಮದಿಂದ ಮಾಡಿಯಾಳ ಗ್ರಾಮದವರೆಗೆ ಮಾಡುತ್ತಿರುವ ರಸ್ತೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ, ನಿಂಬರ್ಗಾದಿಂದ ವೈಜಾಪೂರವರೆಗೆ ರಸ್ತೆ ಹಾಗೂ ಬಸ್ ಸಂಪರ್ಕ ಕಲ್ಪಿಸುವುದು, ನಿಂಬರ್ಗಾ ತಾಂಡಾಕ್ಕೆ ಬಸ್ಸಿನ ಸೌಕರ್ಯ ಹಾಗೂ ನಿಂಬರ್ಗಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 60 ಲಕ್ಷ. ರೂ. ವೆಚ್ಚದಲ್ಲಿ ಕಳಪೆ ಸಿಸಿ ರಸ್ತೆ ನಿರ್ಮಿಸುತ್ತಿರುವ ಕುರಿತು ದೂರು ನೀಡಲಾಯಿತು. ಆದರೂ ಯಾವುದೇ ಸ್ಪಂದನೆ ದೂರತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕ್ರಾಂತಿ ದಳದ ಸಂತೋಷ ಪವಾರ, ಅಶೋಕ ಚವ್ಹಾಣ, ಮೋಹನ ರಾಠೋಡ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆಗೆ ಬೆಂಬಲಿಸಿದ್ದ ಗ್ರಾಮದ ಅಮೃತ ಬಿಬ್ರಾಣಿ, ರಾಜು ಸರ್ವೋದಯ, ಬಾವೋದ್ದೀನ್ ಪಟೇಲ, ಕಡಗಂಚಿಯ ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಆಳಂದ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಸಂತೋಷ ಹಾದಿಮನಿ, ನಾಗರಾಜ ಶೇಗಜಿ, ಗುಂಡಪ್ಪ ಪೂಜಾರಿ, ಶರಣು ಸರಸಂಬಿ, ಗುರು ಪಾಟೀಲ, ವೈಜನಾಥ ಪಾಟೀಲ, ಲಕ್ಷ್ಮೀಕಾಂತ ಸೇರಿದಂತೆ ನಿಂಬರ್ಗಾ ವಲಯದ ಅನೇಕ ಮುಖಂಡರು ಭಾಗವಹಿಸಿದ್ದರು.

ಸ್ಥಳಕ್ಕೆ ಆಗಮಿಸಿದ್ದ ನಾಡ ತಹಸೀಲ್ದಾರ ಅವರಿಗೆ ಬೇಡಿಕೆಯ ಮನವಿ ಸಲ್ಲಿಸಲಾಯಿತು. ಈ ಕುರಿತು ಮೇಲಾಧಿಕಾರಿಗಳಿಗೆ ಮನವಿ ಕಳುಹಿಸಿಕೊಡಲಾಗುವುದು ಎಂದು ತಹಸೀಲ್ದಾರರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

Join WhatsApp

Join Now

Leave a Comment

error: Content is Protected!