ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಛಲವಾದಿ ಮಹಾಸಭಾ ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ.

On: July 28, 2025 7:38 PM

ಆಳಂದ: ರಾಜ್ಯ ಛಲವಾದಿ ಮಹಾಸಭಾ ತಾಲೂಕು ಹಾಗೂ ಗ್ರಾಮ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಜಂಗಲೆ ನೇತೃತ್ವದಲ್ಲಿ, ಜಿಲ್ಲಾಧ್ಯಕ್ಷ ಮಹಾದೇವ ಮೋಘಾ ಅವರ ಮಾರ್ಗದರ್ಶನದಲ್ಲಿ ಈ ಸಭೆ ಜರುಗಿತು.

ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಚಂದ್ರಕಾಂತ ಜಂಗಲೆ ಅವರು ಪ್ರಮಾಣಪತ್ರ ವಿತರಿಸಿ ಅಧಿಕಾರ ವಹಿಸಿಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹಾದೇವ ಮೋಘಾ, ಜಿಲ್ಲಾ ಉಪಾಧ್ಯಕ್ಷ ಸಂಪತಕುಮಾರ ವಳಕೇರಿ, ಚಂದ್ರಕಾಂತ ವಾಲಿ, ಕಲಬುರಗಿ ನಗರಾಧ್ಯಕ್ಷ ಗೌತಮ್ ಬುರ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮಹಾಸಭೆಯ ಮೂಲಕ ಜನಪರ ಹೋರಾಟಗಳನ್ನು ನಡೆಸುವ ಮಹತ್ವದ ಸಲಹೆಗಳನ್ನು ನೀಡಿದರು.

ಪದಾಧಿಕಾರಿಗಳ ವಿವರ ಹೀಗಿದೆ:

▶ ತಾಲೂಕು ಘಟಕ: ಪ್ರವೀಣ ಮೊದಲೆ – ಉಪಾಧ್ಯಕ್ಷ, ಅಜಯ ನಡಗೇರಿ – ಖಜಾಂಚಿ, ಮಹೇಶ ಮುಕನೂರ – ಸಹ ಕಾರ್ಯದರ್ಶಿ.

▶ ಆಳಂದ ಘಟಕ: ಭರತ್ ಸಜ್ಜನ್ – ವಿದ್ಯಾರ್ಥಿ ಘಟಕದ ಅಧ್ಯಕ್ಷಶ, ಶಿಕುಮಾರ ನಡಗೇರಿ – ಉಪಾಧ್ಯಕ್ಷ, ಸುಧಾಕರ ಮೊದಲೆ – ಸಹ ಕಾರ್ಯದರ್ಶಿ, ಮಿಲಿಂದ ಮೋಘಾ – ಸಂಘಟನಾ ಕಾರ್ಯದರ್ಶಿ, ದತ್ತಾ ಮೇಲಿನಕೇರಿ – ಖಜಾಂಚಿ, ಮಲ್ಲಿಕಾರ್ಜುನ ಶ್ರೀಂಗೇರಿ – ನಗರ ಅಧ್ಯಕ್ಷ.

▶ ಗ್ರಾಮ ಘಟಕಗಳು: ಮಾದನಹಿಪ್ಪರಗಾ: ಅಂಬರೇಶ ನಾಗೂರೆ – ಅಧ್ಯಕ್ಷ, ನಾಗಪ್ಪ ದಗಾಶಿರೂರ – ಉಪಾಧ್ಯಕ್ಷ, ಗೌತಮ್ ಸೋನ ಕಾಂಬಳೆ – ಪ್ರಧಾನ ಕಾರ್ಯದರ್ಶಿ, ಪ್ರದೀಪ ಅನಿಗೊಳ – ಸಹ ಕಾರ್ಯದರ್ಶಿ.

▶ ಕಡಗಂಚಿ: ಪಂಡಿತ ದೊಡ್ಡಮನಿ – ಅಧ್ಯಕ್ಷ.

▶ ಕಿಣ್ಣಿಸುಲ್ತಾನ್: ಗೌತಮ್ – ಅಧ್ಯಕ್ಷ, ರತಿಕಾಂತ – ಉಪಾಧ್ಯಕ್ಷ.

ಮಹಾಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಜಂಗಲೆ ಅವರು ಈ ಮಾಹಿತಿಯನ್ನು ನೀಡಿದ್ದು, ಎಲ್ಲ ಪದಾಧಿಕಾರಿಗಳು ಜನತೆಯ ಹಿತಕ್ಕಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.

Join WhatsApp

Join Now

Leave a Comment

error: Content is Protected!