ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪ ಅಗಲಿಕೆಗೆಶೋಕ ವ್ಯಕ್ತದೊಂದಿಗೆ ಸರಳ ಸ್ವಾತಂತ್ರ್ಯೋತ್ಸವ ಆಚರಣೆ

On: August 16, 2025 1:46 PM

ಆಳಂದ: ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪ ಅಗಲಿಕೆಗೆ ಶೋಕ ವ್ಯಕ್ತದೊಂದಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾದಾಸೋಹಿ 8ನೇ ಪೀಠಾಧಿಪತಿ ಲಿಂ. ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂತಾಪ ಸೂಚಿಸಿ ಮೌನಾಚರಣೆಯನ್ನು ಆಚರಿಸುವ ಮೂಲಕ ರಾಷ್ಟ್ರೀಯ ಉತ್ಸವವನ್ನು ಸ್ಥಳೀಯ ದುಃಖದೊಂದಿಗೆ ಸಂಯೋಜಿಸಿ ಆಚರಿಸುವುದರೊಂದಿಗೆ ಸಮುದಾಯದ ಭಾವನಾತ್ಮಕ ಬಾಂಧವ್ಯವನ್ನು ಸಾಮೂಹಿಕವಾಗಿ ಮೆರೆಯಲಾಯಿತು.

ಸ್ವಾತಂತ್ರ್ಯೋತ್ಸವಕ್ಕೆ ಸಾಮಾನ್ಯವಾಗಿ ನಡೆಯಬೇಕಿದ್ದ ವೇದಿಕೆಯ ಸಮಾರಂಭ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಇತರ ಉತ್ಸವಾತ್ಮಕ ಚಟುವಟಿಕೆಗಳನ್ನು ರದ್ದುಗೊಳಿಸಿ, ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಮೌನವನ್ನೇ ಆಚರಿಸಲಾಯಿತು. ಸಂಘ, ಸಂಸ್ಥೆಗಳಲ್ಲಿ ಪೂಜ್ಯರ ಭಾವಚಿತ್ರಕ್ಕೆ ಶೃದ್ಧಾಂಜಲಿ ಅರ್ಪಿಸಲಾಯಿತು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ತಾಲೂಕು ಆಡಳಿತದ ಆಶ್ರಯದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷರೂ ಆದ ಶಾಸಕ ಬಿ.ಆರ್. ಪಾಟೀಲ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಡಾ. ಅಪ್ಪ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು. ನಡೆಯಬೇಕಾಗಿದ್ದ ಸಾಂಸ್ಕøತಿಕ ಸೇರಿ ಇನ್ನೂಳಿದ ಕಾರ್ಯಕ್ರಮಗಳನ್ನು ಮೊಟುಕುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಫಿರ್ಧೋರ್ಸ್ ಅನ್ಸಾರಿ ಗೌಡಾ, ಉಪಾಧ್ಯಕ್ಷ ಕವಿತಾ ಎಸ್. ನಾಯಕ, ತಹಸೀಲ್ದಾರ ಅಣ್ಣಾರಾವ್ ಪಾಟೀಲ, ನೂತನ ಡಿವೈಎಸ್‍ಪಿ ತಮ್ಮರಾಯ ಆರ್. ಪಾಟೀಲ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಸೇರಿದಂತೆ ಪುರಸಭೆ ಸದಸ್ಯರು, ರಾಜಕೀಯ ಮುಖಂಡರು ವಿವಿಧ ಇಲಾಖೆಯ , ಅಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದಲ್ಲೂ ಇದೇ ರೀತಿಯ ಸರಳತೆ ಕಂಡುಬಂದಿತು. ವಿವಿಧ ಶಾಲಾ-ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಧ್ವಜಾರೋಹಣ ನಡೆದರೂ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಟುಕುಗೊಳಿಸಲಾಯಿತು. ಇದು ಡಾ. ಅಪ್ಪ ಅವರ ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವಂತೆ ಮಾಡಿತು. ಅವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ್ದರು, ಆದರೆ ಅವರ ಅಗಲಿಕೆಯಿಂದಾಗಿ ಉತ್ಸವದ ಉಲ್ಲಾಸವು ಮಂಕಾಗಿತ್ತು.

Join WhatsApp

Join Now

Leave a Comment

error: Content is Protected!