ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

52 ಸಾವಿರ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ – ಗಾಂಜಾ ಬಳಕೆಯ ಅಪಾಯದ ಬಗ್ಗೆ ಜಾಗೃತಿ ಅಗತ್ಯ

On: October 21, 2025 7:21 PM

ಆಳಂದ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಕಲೆಹಾಕಿದ ಆಳಂದ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ತುಳಜಾಪೂರ ತಾಲೂಕಿನ ಕುನಸಾವಳಗಿ ಗ್ರಾಮದ ಅರ್ಜುನ ಸಿಂದೆ (45) ಹಾಗೂ ತಾಲೂಕಿನ ಹೆಬ್ಬಳಿ ಗ್ರಾಮದ ಜೀವನ್ ದೇಡೆ (25) ಬಂಧಿತ ಆರೋಪಿತರಾಗಿದ್ದಾರೆ. ಬಂಧಿತರಿಂದ ಪೊಲೀಸರು ₹53,000 ಮೌಲ್ಯದ 503 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ವರಿಷ್ಠಾಧಿಕಾರಿ ಮಹೇಶ್ ಮೇಘನವರ, ಡಿವೈಎಸ್‍ಪಿ ತಮ್ಮರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಐ ಶರಣಬಸಪ್ಪ ಕೊಡ್ಲಾ ಅವರ ನೇತೃತ್ವದ ಪೊಲೀಸ್ ತಂಡದಲ್ಲಿ ಸಿಬ್ಬಂದಿ ಗಣಪತಿರಾವ್ ಘಂಟೆ, ಮಹಿಬೂಬ ಶೇಖ, ಶೇಖರ, ಜಾಕೀರ, ಸಿದ್ಧರಾಮ, ವೇಂಕಟೇಶ, ಮೌಲಾಲಿ ಕಾರ್ಯಚರಣೆ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.


ಗಾಂಜಾ ಬಳಕೆಯ ಅಪಾಯ – ಜಾಗೃತಿಯ ಅಗತ್ಯ

ಗಾಂಜಾ ಅಥವಾ ಇತರ ಮಾದಕ ವಸ್ತುಗಳ ಬಳಕೆ ಇಂದು ಯುವ ಜನತೆಯಲ್ಲೇ ಹೆಚ್ಚು ಕಂಡುಬರುತ್ತಿದೆ. ಹಲವರು “ಆರಾಮಕ್ಕಾಗಿ” ಅಥವಾ “ಮನರಂಜನೆಗಾಗಿ” ಆರಂಭಿಸಿದ ವ್ಯಸನವು ಕಾಲಕ್ರಮೇಣ ಜೀವದ ನಾಶದ ದಾರಿಯತ್ತ ಕರೆದೊಯ್ಯುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, ಗಾಂಜಾ ಸೇವನೆಯಿಂದ ಮೆದುಳಿನ ಕಾರ್ಯಕ್ಷಮತೆ ಕುಗ್ಗುವುದು, ಸ್ಮರಣಶಕ್ತಿ ಹಾನಿಯಾಗುವುದು, ಆತಂಕ, ನೈರಾಶ್ಯ ಹಾಗೂ ಮಾನಸಿಕ ಅಸ್ಥಿರತೆ ಹೆಚ್ಚುವುದು ಮುಂತಾದ ದುಷ್ಪರಿಣಾಮಗಳು ಉಂಟಾಗುತ್ತವೆ. ದೀರ್ಘಕಾಲದ ಬಳಕೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಸಮಾಜದಲ್ಲಿ ಇಂತಹ ಮಾದಕ ವ್ಯಸನದ ಹಾವಳಿ ತಡೆಗಟ್ಟಲು ಕುಟುಂಬ, ಶಾಲೆ ಹಾಗೂ ಸಮುದಾಯದ ಪಾತ್ರ ಅತ್ಯಂತ ಮುಖ್ಯವಾಗಿದೆ. ಯುವಕರು ಕ್ರೀಡೆ, ಕಲೆ, ಮತ್ತು ಸಮಾಜಮುಖಿ ಚಟುವಟಿಕೆಗಳತ್ತ ತೊಡಗಿಸಿಕೊಂಡರೆ ನಶೆಯಿಂದ ದೂರ ಇರಬಹುದು.

ಸಚೇತನ ಸಮಾಜ ಮಾತ್ರವೇ ವ್ಯಸನರಹಿತ ಪೀಳಿಗೆಯನ್ನು ನಿರ್ಮಿಸಬಲ್ಲದು. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ.

Join WhatsApp

Join Now

Leave a Comment

error: Content is Protected!