ಕಲಬುರಗಿ :ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾದಳ (KSNDMC) ಜಾಲತಾಣವು ಗುರುವಾರ ಬೆಳಿಗ್ಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜವಳಗಾ ಗ್ರಾಮದ ಸಮೀಪ 2.3 ಮ್ಯಾಗ್ನಿಟ್ಯೂಡ್ ತೀವ್ರತೆಯ ಭೂಕಂಪವನ್ನು ದಾಖಲಿಸಿದೆ.
KSNDMC ನೀಡಿದ ಮಾಹಿತಿಯ ಪ್ರಕಾರ, ಭೂಕಂಪವು ಬೆಳಿಗ್ಗೆ 08.17.43ಕ್ಕೆ ಸಂಭವಿಸಿದ್ದು, ಇದರ ಕೇಂದ್ರಬಿಂದು ಜವಳಗಾ ಗ್ರಾಮದಿಂದ ಆಗ್ನೇಯಕ್ಕೆ 0.5 ಕಿಮೀ ದೂರದಲ್ಲಿದೆ. ಭೂಕಂಪದ ಆಳವನ್ನು 7 ಕಿಮೀ ಎಂದು ದಾಖಲಿಸಲಾಗಿದೆ.

ಕೇಂದ್ರಬಿಂದು ಸುತ್ತಮುತ್ತಲಿನ ಪ್ರಮುಖ ಸ್ಥಳಗಳು: ಸಿರಚಂದ ಗ್ರಾಮ ಪಂಚಾಯಿತಿಯಿಂದ ಪಶ್ಚಿಮಕ್ಕೆ 2.4 ಕಿಮೀ. ಚಿಂಚನಸೂರ ಗ್ರಾಮ ಪಂಚಾಯಿತಿಯಿಂದ ಈಶಾನ್ಯಕ್ಕೆ 4.0 ಕಿಮೀ. ಕಲಬುರಗಿ ನಗರದಿಂದ ಉತ್ತರಕ್ಕೆ 22 ಕಿಮೀ.
ಸೀಸ್ಮಿಕ್ ಇಂಟೆನ್ಸಿಟಿ ನಕ್ಷೆಯ ಪ್ರಕಾರ, ಈ ಭೂಕಂಪದಿಂದ 20–25 ಕಿಮೀ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ಕಂಪನಗಳನ್ನು ಅನುಭವಿಸುವ ಸಾಧ್ಯತೆ ಇದೆ. ಆದರೆ ತೀವ್ರತೆ ಕಡಿಮೆಯಾಗಿರುವುದರಿಂದ ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿ ಸಂಭವಿಸುವ ಸಾಧ್ಯತೆ ಇಲ್ಲವೆಂದು KSNDMC ತಿಳಿಸಿದೆ.

ಈ ಪ್ರದೇಶವು ಸೀಸ್ಮಿಕ್ ಝೋನ್–III ಅಡಿಯಲ್ಲಿ ಬರುತ್ತದೆ. ಟೆಕ್ಟಾನಿಕ್ ನಕ್ಷೆ ಪ್ರಕಾರ ಯಾವುದೇ ರಚನಾತ್ಮಕ ಅಡಚಣೆಗಳಿಲ್ಲದ ಕಾರಣ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
– ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾದಳ (KSNDMC), ಬೆಂಗಳೂರು









