ಆಳಂದ: ಪಟ್ಟಣದ ಪುರಸಭೆ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ವಿವಿಧ ಯೋಜನೆಯ ಅನುದಾನದ 2.80ಕೋಟಿ ವೆಚ್ಚದಲ್ಲಿ ಒಟ್ಟು 41 ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ ಗೌಡ ಅವರು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಜೊತೆಗೊಡಿ ಆಯಾ ಬಡಾವಣೆ ಪುರಸಭೆ ಸದಸ್ಯರ ಸಮ್ಮುಖದಲ್ಲಿ ಗುದ್ದಲಿಪೂಜೆ ನೆರವೇರಿಸಿದರು.
ಇದುವರೆಗಿನ ಅಧ್ಯಕ್ಷರಗಳ ಪೈಕಿ ಮೊದಲು ಬಾರಿಗೆ ಏಕಕಾಲಕ್ಕೆ ದೊಡ್ಡ ಮೊತ್ತದ ಕಾಮಗಾರಿಗಳ ಸ್ವತ ಅಡಿಗಲ್ಲು ನೆರವೇರಿಸುವ ಮೂಲಕ ಅಧ್ಯಕ್ಷ ಫಿರದೋಸ್ ಅನ್ಸಾರಿ ಅವರು ಮೊದಲಿಗರಾದಾರು.
ಪಟ್ಟಣದ ಶರಣನಗದರ ಸರ್ಕಾರಿ ಪ್ರಾಥಮಿಕ ಶಾಲಾ ಆವರಣಗೋಡೆ, ಭೀಮನಗರದ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ, ಹತ್ತ್ಯಾನಗಲ್ಲಿಯ ಕೊಳವೇ ಬಾವಿ ಉದ್ಘಾಟನೆ ಡೋಹರಗಲ್ಲಿ ಸೇರಿದಂತೆ ದಾದಾಪೀರ ದರ್ಗಾ ಬಳಿ, ಅಜಿಮೋದ್ದೀನ್ ನಗರ ಮನೆಯ ಬಳಿ ಆಪೇಕ್ಸ್ ಶಾಲೆಯ ಹತ್ತಿರ, ಏಕಮೀನಾರ ಮಸೀದಿ ಹತ್ತಿರದ, ಕಾಲಿ ಮಸೀದಿ ಬಡಾವಣೆಗಳಲ್ಲಿ ಸಿಸಿ ರಸ್ತೆ, ಆವರಣಗೋಡೆ, ಆರ್‍ಸಿಸಿ ಚರಂಡಿ, ಕೊಳವೆ ಬಾವಿ, ಪೈಪಲೈನ್ ಘನತ್ಯಾಜ್ ಸಂಗ್ರಹ ಘಟಕದಲ್ಲಿ ವೈಕಲ್ ಪಾರ್ಕಿಂಗ್ ಕಾಮಗಾರಿಗೆ ಗುದ್ದಲಿ ಪೂಜೆ ಕೈಗೊಂಡರು. ಪರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಎಇಇ ಜಗದೀಶ ಹಿರೇಮಠ ಜೊತೆಗಿದ್ದರು.
ಶರಣನಗರ ಮತ್ತು ಭೀಮನಗರ ಕಾಮಗಾರಿ ಪೂಜೆಯಲ್ಲಿ ಪುರಸಭೆ ಸದಸ್ಯ ಲಕ್ಷ್ಮಣ ಕಟ್ಟಿಮನಿ, ಮೃತ್ಯುಂಜ ಆಲೂರೆ, ಆಸೀಫ್ ಚೌಸ್, ರಾಜು ಕಟ್ಟಿಮನಿ, ಮುಖಂಡ ಸೂರ್ಯಕಾಂತ ತಟ್ಟಿ, ರೇವಣಸಿದ್ಧಪ್ಪ ನಾಗೂರೆ, ಚಂದ್ರಕಾಂತ ಜಂಗಲೇ, ರಾಜು ಸನ್ಮೂಖ ಮತ್ತು ಶಾಲಾ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥತರಿದದರು.
ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತೇವೆ: ಚುನಾವಣೆ ಪೂರ್ವ ಶಾಸಕರಾದ ಬಿ.ಆರ್. ಪಾಟೀಲ, ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲು ಬದ್ಧರಾಗಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ, ರಸ್ತೆ, ವಿದ್ಯುತ್ ಸಂಪರ್ಕದಂತ ಅನೇಕ ಮೂಲಸೌಕರ್ಯ ಕೆಲಸಗಳಿಗೆ ಒತ್ತು ನೀಡಲಾಗಿದೆ. ಬಾಕಿ ಉಳೀದ ಸಮಸ್ಯೆಗಳನ್ನು ಜನರು ಗಮನಕ್ಕೆ ತಂದರೆ ಶಾಸಕರ ಗಮನಕ್ಕೆ ತಂದು ಅನುದಾನ ಒದಗಿಸಿ ನಿವಾರಿಸಲಾಗುವುದು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದರು ಸಹ ವಿರೋಧ ಪಕ್ಷದವರು ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಸುಳ್ಳು ಆರೋಪಗಳು ಮಾಡುತ್ತಿದ್ದಾರೆ. ಜನರಿಗೆ ಇದೆಯಲ್ಲ ಸತ್ಯಗೊತ್ತಿದೆ. ಸುಳ್ಳು ಹೇಳುವರ ಮಾತಿಗೆ ಜನ ಕಿವಿಗೊಡಬಾರದು. – “ಆರ್.ಕೆ. ಪಾಟೀಲ ಕೆಎಂಎಫ್ ಅಧ್ಯಕ್ಷ“
ಕಲಬುರಗಿ ತುರ್ತು ಕಾಮಗಾರಿಗೆ ಆದತ್ಯೆ: ಬಡಾವಣೆಗಳಲ್ಲಿ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನೂ ಸಾಕಷ್ಟು ಬಡಾವಣೆಗಳಲ್ಲಿ ಕಾಮಗಾರಿಗಳ ಬೇಡಿಕೆಯಿದ್ದು ಪುರಸಭೆ ಅನುದಾನದೊಂದಿಗೆ ಶಾಸಕರ ಗಮನಕ್ಕೆ ತಂದು ಇನ್ನೂಳಿದ ಕಾಮಗಾರಿಗಳನ್ನು ಹಂತ, ಹಂತವಾಗಿ ಕೈಗೊಳ್ಳಲಾಗುತ್ತಿದೆ. ಈ ಕುರಿತು ಶಾಸಕರಾದ ಬಿ.ಆರ್. ಪಾಟೀಲ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ನಾಗರಿಕರ ಸಹಕಾರ ಅಗತ್ಯವಾಗಿದೆ. -“ಫಿರದೋಸ್ ಅನ್ಸಾರಿಗೌಡ ಅಧ್ಯಕ್ಷರು ಪುರಸಭೆ ಆಳಂದ.”
ಸಾಮಾನ್ಯ ಸಭೆಯಲ್ಲಿ ಆಯ್ಕೆ:ವಿವಿಧ ಬಡಾವಣೆಗಳಲ್ಲಿ 2023-24ನೇ ಸಾಲಿನ ಪುರಸಭೆ 15ನೇ ಹಣಕಾಸು ಮತ್ತು ಎಸ್‍ಎಫ್‍ಸಿ ನಿಧಿಯನಲ್ಲಿ 2.80 ಕೋಟಿ ವೆಚ್ಚದಲ್ಲಿ 41 ಕಾಮಗಾರಿಗಳನ್ನು ಪುರಸಭೆ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಿಕೊಂಡು ಮೇಲಾಧಿಕಾರಿಗಳ ಅನುಮೊದನೆ ಪಡೆದುಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನೂಳಿದ ಕಾಮಗಾರಿಗಳನ್ನು ಬರುವ ಸಾಮಾನ್ಯ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದು ಆಡಳಿತ ಮಂಡಳಿಯ ಸದಸ್ಯರ ಸೂಚಿಸುವ ಕಾಮಗಾರಿಗಳನ್ನು ಅನುದಾನದ ಸಾಧಕತೆ ನೋಡಿಕೊಂಡು ಕ್ರಮವಹಿಸಲಾಗುವುದು. -“ಸಂಗಮೇಶ ಪನಶೆಟ್ಟಿ ಮುಖ್ಯಾಧಿಕಾರಿಗಳು ಪರಸಭೆ ಆಳಂದ.”