ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್. ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕಟ್ಟಡವನ್ನು ಎರಡು ವರ್ಷಗಳಿಂದ ಕೃಷಿ ಇಲಾಖೆಗೆ ಹಸ್ತಾಂತರಿಸದಿರುವುದಕ್ಕೆ ಸರ್ವ ಸಮಾಜ ಕಲ್ಯಾಣ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸಮಿತಿಯ ಅಧ್ಯಕ್ಷ ವಿಠಲ್ ಸಿ. ಕೋಣಿಕ ಮತ್ತು ಕಾರ್ಯದರ್ಶಿ ಚಂದ್ರಕಾಂತ ದುಗೊಂಡ ನೇತೃತ್ವದಲ್ಲಿ, ಕಟ್ಟಡವನ್ನು ಒಂದು ವಾರದಲ್ಲಿ ಹಸ್ತಾಂತರಿಸದಿದ್ದರೆ ಕೆ.ಆರ್.ಐ.ಡಿ.ಎಲ್. ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಕೆಆರ್‍ಐಡಿಎಲ್ ಅಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.
ಹಸ್ತಾಂತರ ವಿಳಂಬದಿಂದ ರೈತರು ಬಾಡಿಗೆ ಕಟ್ಟಡದಲ್ಲಿ ಸೇವೆ ಪಡೆಯುತ್ತಿದ್ದು, ಸರ್ಕಾರಕ್ಕೆ ಆರ್ಥಿಕ ನಷ್ಟವಾಗುತ್ತಿದೆ. “ಈ ನಿರ್ಲಕ್ಷ್ಯದಿಂದ ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ ವಿತರಣೆ ಸೇರಿದಂತೆ ಕೃಷಿ ಮಾಹಿತಿ ತಲುಪುವಲ್ಲಿ ತೊಂದರೆ ಆಗುತ್ತಿದೆ. ಕಟ್ಟಡ ಹಸ್ತಾಂತರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗಡವು ನೀಡಿದ್ದಾರೆ.









