ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕರೆ.

On: August 26, 2025 8:32 PM

ಆಳಂದ: ಮಕ್ಕಳು ಮತ್ತು ಮಹಿಳೆಯರಿಗೆ ಮುಕ್ತ ಅವಕಾಶಗಳನ್ನು ಒದಗಿಸುವ ಜೊತೆಗೆ ಅವರ ಅಭಿವೃದ್ಧಿಗೆ ಬೆಂಬಲ ನೀಡಬೇಕು. ಗಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸತ್ಪ್ರಜೆಗಳಾಗಿ ಬೆಳೆಯುವ ನಿಟ್ಟಿನಲ್ಲಿ ತಿಳಿವಳಿಕೆ ನೀಡಬೇಕು ಎಂದು ಕಲಬುರ್ಗಿಯ ಸಂಸ್ಕಾರ ಪ್ರತಿಷ್ಠಾನದ ಮುಖ್ಯಸ್ಥ ವಿಠ್ಠಲ್ ಚಿಕಣಿ ಪಾಲಕರಿಗೆ ಸಲಹೆ ನೀಡಿದರು.

ತಾಲೂಕಿನ ನಂದಗೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮಾರಾಟ ಜಾಲ, ಮಹಿಳಾ ಸಂರಕ್ಷಣೆ ಹಾಗೂ ಸೇಫ್ ವಿಲೇಜ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

2009–14ರಲ್ಲಿ ಕಲಬುರ್ಗಿ ಜಿಲ್ಲೆಯಾದ್ಯಂತ ಕೆ. ನೀಲಾ, ಡಾ. ಮೀನಾಕ್ಷಿ ಬಾಳಿ ಮತ್ತು ಲವಿತ್ರ ವಸ್ತ್ರ ಅವರೊಡಗೂಡಿ ಭ್ರೂಣ ಹತ್ಯೆಗಳನ್ನು ತಡೆದಿದ್ದನ್ನು ಸ್ಮರಿಸಿದ ಚಿಕಣಿ ಅವರು, ಭ್ರೂಣಕ್ಕೆ ಕತ್ತರಿ ಹಾಕಿದ ಪ್ರಕರಣಗಳನ್ನು ಬಯಲುಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಕಾಯ್ದೆ ರೂಪಿಸುವ ಪ್ರಯತ್ನದ ಬಗ್ಗೆ ಹೇಳಿದರು.

‘ಗುಜ್ಜರ್ ಕಿ ಶಾದಿ’, ಮಹಿಳೆಯರ ಮಾರಾಟ, ಅಕ್ರಮ ಚಟುವಟಿಕೆಗಳಿಗೆ ಹೆಣ್ಣು ಮಕ್ಕಳನ್ನು ದೂಡುವ ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಸಂಸ್ಥೆ ಶ್ರಮಿಸುತ್ತಿರುವುದನ್ನು ಉಲ್ಲೇಖಿಸಿದರು. ಭಿತ್ತಿಪತ್ರಗಳು ಮತ್ತು ಪ್ರಚಾರ ಪುಸ್ತಕಗಳನ್ನು ವಿತರಿಸಿದ ಅವರು, ಮಕ್ಕಳ ಸುರಕ್ಷತೆಗಾಗಿ ಅಪರಿಚಿತರೊಂದಿಗೆ ಮಾತನಾಡದಿರುವುದು, ಒಬ್ಬಂಟಿಯಾಗಿ ಹೋಗದಿರುವುದು, ಶೋಷಣೆಯನ್ನು ಪ್ರತಿಭಟಿಸುವಂತೆ ಹೇಳಿದರು.

ಮೈಲಾರಿ ದೊಡ್ಮಣಿ ಅವರು ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ವಿವರಿಸಿದರು.

ಶಾಲೆಯ ಶಿಕ್ಷಕ ರವೀಂದ್ರ ರುದ್ರವಾಡಿ, ಸುರಕ್ಷಿತ ಸಾಮಾಜಿಕ ವಾತಾವರಣ ಒದಗಿಸುವ ನಿಟ್ಟಿನಲ್ಲಿ ನಂದಗೂರಿನ ಪಾಲಕರು ಮತ್ತು ಸಮುದಾಯದ ಜಾಗೃತಿಯನ್ನು ಕೊಂಡಾಡಿದರು. ಈಗಾಗಲೇ ಶಾಲೆ ಮತ್ತು ಗ್ರಾಮದಲ್ಲಿ ನಡೆದಿರುವ ಇಂತಹ ಕಾರ್ಯಕ್ರಮಗಳನ್ನು ಮೆಲುಕು ಹಾಕಿದರು.

ಉಷಾ ಗೊಬ್ಬುರ ಅವರು, 21ನೇ ಶತಮಾನದಲ್ಲೂ ಅಸಮಾನತೆ ಮತ್ತು ಶೋಷಣೆಗಳು ಸುಸಂಸ್ಕೃತ ಸಮಾಜಕ್ಕೆ ತರವಲ್ಲ ಎಂದು ಹೇಳಿ, ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಆಲೋಚಿಸಬೇಕು ಎಂದರು.

ಶಾಲಾ ಸಂಸತ್ತಿನ ಪ್ರಧಾನಮಂತ್ರಿ ಪ್ರಜ್ಞಾ ಅಂಬಾದಾಸ್ ಕಾಂಬಳೆ ಪಾಲಕರಲ್ಲಿ ಬಾಲ್ಯ ವಿವಾಹ ಮಾಡದಂತೆ ಮನವಿ ಮಾಡಿ ಮಕ್ಕಳ ಭವಿಷ್ಯವನ್ನು ಹಾಳುಮಾಡಬೇಡಿ ಎಂದರು.

ಅಧ್ಯಕ್ಷತೆ ವಹಿಸಿದ ಮುಖ್ಯಗುರು ಪಂಪಾಪತಿ ಗಾಣಿಗೇರ್ ಮಾತನಾಡಿದರು. ಶಾಲಾ ಸಹಶಿಕ್ಷಕ ಬಸವರೆಡ್ಡಿ ಪಾಟೀಲ್, ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಶಿವಕುಮಾರ್ ಸ್ವಾಮಿ, ಸಹಾಯಕಿ ಕಲ್ಪನಾ ರಾಹುಲ್ ಕಾಂಬಳೆ, ಆಶಾ ಕಾರ್ಯಕರ್ತೆ ಮಲ್ಲಮ್ಮ ಸಂಗಮೇಶ್ ಬಡ್ದುರ್ಗೆ, ಎಸ್‍ಡಿಎಂಸಿ ಉಪಾಧ್ಯಕ್ಷೆ ಶೋಭಾ ಬಾಲಾಜಿ ಬಿರಾದಾರ್ ಸೇರಿದಂತೆ ಸದಸ್ಯರಾದ ಕವಿತಾ ಧನರಾಜ್ ಬಿರಾದಾರ್, ರಾಜೇಂದ್ರ ಮುರಮೆ, ಅಂಬಾದಾಸ್ ಕಾಂಬಳೆ, ಲಕ್ಷ್ಮಣ್ ಕಾಂಬಳೆ, ರೇಣುಕಾ ಶಿವಕುಮಾರ್ ಪಾಟೀಲ್, ಸುರೇಖಾ ಪಂಡಿತ್ ಬಡ್ದುರ್ಗೆ, ಇಟಾಬಾಯಿ ತಾತ್ಯಾರಾವ ಬಡ್ದುರ್ಗೆ ಉಪಸ್ಥಿತರಿದ್ದರು.

Join WhatsApp

Join Now

Leave a Comment

error: Content is Protected!