ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ ಹಾಗೂ ಕಾರ್ಗಿಲ್ ವಿಜಯೋತ್ಸವ ವಿಜೃಂಭಣೆಯಿಂದ.

On: July 26, 2025 4:48 PM

ಆಳಂದ: ಆಳಂದದ ಶರಣ ಮಂಟಪದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಆಳಂದ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ, ಕಾರ್ಯಕಾರಿಣಿ ಸಭೆ, ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಬೀದರ ದಕ್ಷಿಣ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಶೈಲೇಂದ್ರ ಬೇಲ್ದಾಳೆ ಅವರು, “ಪಕ್ಷ ಸಂಘಟನೆಯನ್ನು ಬಲಗೊಳಿಸುವಲ್ಲಿ ನೂತನ ಪದಾಧಿಕಾರಿಗಳೆಲ್ಲರೂ ನೀಡಲಾದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು” ಎಂದು ಸಲಹೆ ನೀಡಿದರು. ಜೊತೆಗೆ ಅವರು ಕಾರ್ಗಿಲ್ ಯುದ್ಧದ ಇತಿಹಾಸವನ್ನು ಸ್ಮರಿಸಿ, ದೇಶದ ರಕ್ಷಣೆಗೆ ಶೂರರ ಬಲಿದಾನವನ್ನು ಗೌರವಿಸಿದರು.

ಬಿಜೆಪಿ ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ ಅವರು, “ಪಕ್ಷದ ಶಕ್ತಿಯನ್ನು ತಳಮಟ್ಟದವರೆಗೆ ತಲುಪಿಸಲು ಕಾರ್ಯಕರ್ತರು ಏಕತೆಯಿಂದ ದುಡಿಯಬೇಕು” ಎಂದು ಸಲಹೆ ನೀಡಿದರು. ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು, ಬೂತ್ ಮಟ್ಟದಿಂದಲೇ ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಮಂಡಲದ ಪದಾಧಿಕಾರಿಗಳಿಗೆ ಆದೇಶ ಪ್ರತಿಗಳನ್ನು ಹಸ್ತಾಂತರಿಸಲಾಯಿತು. ಮುಂದಿನ ಕಾರ್ಯತಂತ್ರ ಹಾಗೂ ಸಂಘಟನಾ ಬಲವರ್ಧನೆ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಮುಖರು:
ಆಳಂದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ, ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ, ಶ್ರೀಶೈಲ ಪಾಟೀಲ, ಮಾಜಿ ಅಧ್ಯಕ್ಷ ಆನಂದ ಪಾಟೀಲ, ಮಲ್ಲಣ್ಣಾ ನಾಗೂರೆ, ಚಂದ್ರಕಾಂತ ಬೂಸನೂರ, ಪಂಡಿತರಾವ ಪಾಟೀಲ, ಶಿವಪ್ಪಾ ವಾರಿಕ, ಪುರಸಭೆ ಸದಸ್ಯರು ಶಿವಪೂತ್ರ ನಡಗೇರಿ, ಗೌರಿ ಚಿಚಕೋಟಿ, ಸುನಿಲ್ ಹಿರೋಳಿಕರ, ಮೈಬೂಬ ಶೇಕ್, ಶಾಂತಮಲ್ಲಪ್ಪ ಅಚಲೇರಿ, ನಗರ ಅಧ್ಯಕ್ಷ ಬಸವರಾಜ ಹತ್ತರಕಿ, ರಾಜಶೇಖರ ಕೊರಳ್ಳಿ, ನಾಗರಾಜ ದೇನಕ, ರಾಜಶ್ರೀ ಶ್ರೀಶೈಲ ಖಜೂರಿ, ಸುನೀತಾ ಪೂಜಾರಿ, ವಂದನಾ ಪೊದ್ದಾರ, ಮೇಘಾ ಕೋಥಳಿಕರ, ವಿಜಯಕುಮಾರ ಕೋಥಳಿಕರ ಮತ್ತು ಇತರರು ಉಪಸ್ಥಿತರಿದ್ದರು.

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಶರಣನಗರದ ನಿವೃತ್ತ ಯೋಧ ಮಲ್ಲಪ್ಪಾ ಕೌಂಚೆ ಅವರನ್ನು ಸನ್ಮಾನಿಸಲಾಯಿತು.

ಪ್ರಾಸ್ತಾವಿಕ ಭಾಷಣ: ಹರ್ಷಾನಂದ ಗುತ್ತೇದಾರ
ನಿರೂಪಣೆ: ಪ್ರಕಾಶ್ ಮಾನೆ
ಸ್ವಾಗತ: ಸೀತಾರಾಮ ಜಮಾದಾರ
ವಂದನಾರ್ಪಣೆ: ವಿನೋದ ಮಡಿವಾಳ

ಇದೇ ರೀತಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Join WhatsApp

Join Now

Leave a Comment

error: Content is Protected!