ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಅಣ್ಣಾ ಬಾವು ಸಾಟೆ ಜಯಂತಿ ಆಳಂದದಲ್ಲಿ ಭಾವಪೂರ್ಣವಾಗಿ ಆಚರಣೆ – ಅವರ ಸಾಹಿತ್ಯ, ಹೋರಾಟ ಇಂದಿನ ಯುವತೆಗೆ ಪ್ರೇರಣೆ: ಸುನಿಲ್ ಹಿರೋಳಿಕರ್

On: August 1, 2025 3:56 PM

ಆಳಂದ: ಇಂದು ಆಳಂದ ಪಟ್ಟಣದ ಲಹುಜಿ ಶಕ್ತಿ ನಗರದಲ್ಲಿ ದಲಿತ ಸಾಹಿತಿ, ಸಮಾಜ ಸುಧಾರಕ ಲೋಕಶಾಹಿ ಅಣ್ಣಾ ಬಾವು ಸಾಟೆ ಅವರ 105ನೇ ಜಯಂತಿಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವು ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ಸಾರ್ಥಕವಾಗಿ ನಡೆಯಿತು.

ಕಾರ್ಯಕ್ರಮದ ನಂತರ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ತಾಲೂಕು ಉಪಾಧ್ಯಕ್ಷ ಹಾಗೂ ಮಾಜಿ ಪುರಸಭೆ ಸದಸ್ಯರಾದ ಸುನಿಲ್ ಹಿರೋಳಿಕರ್ ಅವರು, “ಅಣ್ಣಾ ಬಾವು ಸಾಟೆ ಮಹಾರಾಷ್ಟ್ರದ ಪ್ರಸಿದ್ಧ ಸಮಾಜ ಸುಧಾರಕರಲ್ಲೊಬ್ಬರು. ಅವರು ಕವಿ, ಬರಹಗಾರ ಹಾಗೂ ದಲಿತ ಹಕ್ಕುಗಳ ಚಿಂತಕನಾಗಿದ್ದರು. ಅಸ್ಪೃಶ್ಯತೆ, ಬಡತನ, ಶೋಷಣೆ, ಕಾರ್ಮಿಕರ ದುರಾವಸ್ಥೆ ಮತ್ತು ರೈತರ ಬದುಕಿನ ಏಳಿಗೆಗಾಗಿ ಅವರು ಸದಾ ಧ್ವನಿ ಎತ್ತಿದರು,” ಎಂದು ಹೇಳಿದರು.

ಅಣ್ಣಬಾವು ಸಾಟೆ ಅವರ ಸಾಹಿತ್ಯದಲ್ಲಿ ಬಡವರ ನೋವು, ಕಾರ್ಮಿಕರ ಕಷ್ಟ, ದಲಿತರ ಪೀಡನೆ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧವಾದ ಬಲವಾದ ಅಭಿವ್ಯಕ್ತಿ ಕಾಣುತ್ತದೆ. ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಅವರ ಬದುಕು ಮತ್ತು ಬರಹಗಳು ಇಂದಿನ ಯುವಕರಿಗೆ ದಾರಿ ತೋರಿಸುವ ದೀಪದಂತಿವೆ ಎಂದು ಹಿರೋಳಿಕರ್ ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಮುಖಂಡರಾದ ಬಾಬು ಮೇತ್ರಿ, ಓಂ ಪ್ರಕಾಶ್ ಪಾತ್ರೆ, ರಮೇಶ್ ಕಾಂಬಳೆ, ಖಂಡು ಗಾಯಕವಾಡ್, ಸಂತೋಷ್ ಪಾತ್ರೆ, ಕರಣ ಪಾತ್ರೆ, ಸುಮಿತ್ ಗಾಯಕ್ವಾಡ್, ಕುಮಾರ್ ಕಾಂಬಳೆ, ವಿಜಯ್ ಧನ್ಯ, ದೀಪಕ್ ಹೊನ್ನೂರ ಮುಂತಾದವರು ಹಾಜರಿದ್ದರು.ಈ ಭಾವನಾತ್ಮಕ ಕಾರ್ಯಕ್ರಮದಲ್ಲಿ ಅಣ್ಣಾ ಬಾವು ಸಾಟೆ ಅವರ ಜೀವನದ ಹಲವಾರು ಉಲ್ಲೇಖಿತ ಕ್ಷಣಗಳು, ಅವರ ಬರಹಗಳು ಮತ್ತು ಹೋರಾಟದ ಕಥನೆಗಳು ನೆನಪಿಗೆ ತಂದರು.

ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಈ ಮಹಾನ್ ಚಿಂತಕರ ಜಯಂತಿಯನ್ನು ಆಚರಿಸುವ ಮೂಲಕ, ನಮ್ಮ ಮುಂದಿನ ಪೀಳಿಗೆಗೆ ಸಜ್ಜಾಗಿಸಲು ಅವರ ಸಂದೇಶಗಳನ್ನು ಮುಂದುವರೆಸಬೇಕಿದೆ ಎಂಬ ಭಾವನೆ ಆಳವಾಗಿ ವ್ಯಕ್ತವಾಯಿತು.

Join WhatsApp

Join Now

Leave a Comment

error: Content is Protected!