ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದ ವಾರ್ಡ್ 21ರ ರಸ್ತೆ ನಿರ್ಲಕ್ಷ – ಬಿಜೆಪಿ ಉಪಾಧ್ಯಕ್ಷ ಸುನಿಲ ಹಿರೋಳಿಕರ್ ಆಕ್ರೋಶ.

On: July 29, 2025 2:09 AM

ಆಳಂದ: ಪಟ್ಟಣದ ವಾರ್ಡ್ 21ರಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ನಿರ್ಲಕ್ಷ್ಯವನ್ನು ಬಿಜೆಪಿ ತಾಲೂಕು ಉಪಾಧ್ಯಕ್ಷ ಹಾಗೂ ಪುರಸಭೆ ಮಾಜಿ ಸದಸ್ಯ ಸುನಿಲ ಹಿರೋಳಿಕರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಬಡಾವಣೆಗಳಲ್ಲಿ ಕೈಗೆತ್ತಿಕೊಂಡ ಜಲ ಜೀವನ ಮಿಷನ್ ಪೈಪಲೈನ್ ಕಾಮಗಾರಿಯ ಪರಿಣಾಮವಾಗಿ ರಸ್ತೆಗಳು ತಿಂಗಳೆ ಕಂಡುಹಿಡಿಯದೆ ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ. “ದ್ವಿಚಕ್ರವಾಹನ ಸವಾರರಿಗೆ ಅಪಘಾತ ಸಂಭವಿಸುವಷ್ಟು ಮಟ್ಟಿಗೆ ರಸ್ತೆ ಸ್ಥಿತಿ ಕೆಟ್ಟಿದೆ. ಮಕ್ಕಳು, ವೃದ್ಧರಿಗೆ ನಿತ್ಯದ ಓಡಾಟ ಕಷ್ಟವಾಗಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

“ಜನರ ಸಮಸ್ಯೆ ಅರಿತು ಶಾಸಕರು ಕೆಲಸ ಮಾಡಲಿ” ಎಂಬ ಮನವಿ ವ್ಯಕ್ತಪಡಿಸಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಬಿ.ಆರ್. ಪಾಟೀಲ ನೀಡಿದ “ಮೂರು ದಿನಕ್ಕೆ ಒಮ್ಮೆ ನೀರು ಪೂರೈಕೆ” ಭರವಸೆ ಈಡೇರದಿರುವುದನ್ನು ಗಂಭೀರವಾಗಿ ಟೀಕಿಸಿದರು. “ಇಂದು 8–10 ದಿನಗಳಿಗೊಮ್ಮೆ ಮಾತ್ರ ನೀರು ಬರುತ್ತಿದೆ. ಅದೂ ಕೆಲದಿನಗಳಲ್ಲಿ ಹುಳುಗಳು ಕಾಣಿಸುತ್ತವೆ. ಶುದ್ಧೀಕರಣವೇ ಆಗುತ್ತಿಲ್ಲ. ಶ್ರೀಮಂತರು ಖರೀದಿ ಮಾಡಬಹುದು, ಬಡವಿಗೆ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ಅದೇಕೆಂದರೆ, ಪೈಪಲೈನ್ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ತಿಂಗಳೆ ತುಂಬಾ ಹಾಗೆಯೇ ಬಿಟ್ಟಿದ್ದಾರೆ. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.

ಸಾರ್ವಜನಿಕ ಸಂಪತ್ತಿನ ದುರುಪಯೋಗವೇಕೆ?ಜ್ಯೂನಿಯರ್ ಕಾಲೇಜು ಆವರಣದ ರಸ್ತೆಯಲ್ಲಿ ಮಳೆ ಬಂದರೆ ನೀರು ಒಳಹೊಕ್ಕು ವಿದ್ಯಾರ್ಥಿಗಳಿಗೆ ಸಂಚಾರ ಅಸಾಧ್ಯವಾಗುತ್ತಿದೆ. ಆದರೆ ಈಂತಹ ಸಾಮಾನ್ಯ ಸಮಸ್ಯೆಗಳಿಗೂ ಅಧಿಕಾರಿಗಳ ಗಮನ ಇಲ್ಲ. ಅಲ್ಲದೆ ಉರಮಗಾ ಹೆದ್ದಾರಿಯಲ್ಲಿ ₹1 ಕೋಟಿ ವೆಚ್ಚದ ರಾಜಕಾಲುವೆ ಕಾಮಗಾರಿ ತುರ್ತು ಅಗತ್ಯವಿಲ್ಲದಿದ್ದರೂ, ಗುತ್ತಿಗೆದಾರರ ಅನುಕೂಲಕ್ಕಾಗಿ ಕೈಗೆತ್ತಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗ್ರಂಥಾಲಯ, ಕ್ಯಾಂಟೀನ್ ಉದ್ಘಾಟನೆಯಿಲ್ಲದ ಕಾರಣ ರಾಜಕೀಯ ದುರುದ್ದೇಶ? ಶ್ರೀರಾಮ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಗ್ರಂಥಾಲಯ ಎರಡು ವರ್ಷವಾದರೂ ಇನ್ನೂ ಉದ್ಘಾಟನೆಯಾಗಿಲ್ಲ. ಇದಕ್ಕೆ ರಾಜಕೀಯ ಕಾರಣವೇ ಕಾರಣ ಎಂದು ಅವರು ಗುಡುಗಿದರು. “ತರಕಾರಿ ವ್ಯಾಪಾರಿಗಳನ್ನು ತೆರವುಗೊಳಿಸಿ ಕಟ್ಟಿದ ಇಂಧಿರಾ ಕ್ಯಾಂಟೀನ್ ಸಹ ಇನ್ನೂ ಚಾಲನೆಗೊಂಡಿಲ್ಲ. ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಇವುಗಳನ್ನು ಸಕಾಲಕ್ಕೆ ಆರಂಭಿಸಬೇಕಿತ್ತು,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Join WhatsApp

Join Now

Leave a Comment

error: Content is Protected!