ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಬಸವೇಶ್ವರ ಪ್ರತಿಮೆ ತೆರವು ಪ್ರಕರಣ – ರುದ್ರವಾಡಿ ಗ್ರಾಮಸ್ಥರ ನೇತೃತ್ವದಲ್ಲಿ ಆಳಂದದಲ್ಲಿ ಬೃಹತ್ ಪ್ರತಿಭಟನೆ.

On: August 18, 2025 9:58 PM

ಆಳಂದ: ಖಜೂರಿ ವಲಯದ ರುದ್ರವಾಡಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆ ತೆರವುಗೊಳಿಸಿರುವ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಗ್ರಾಮಸ್ಥರ ನೇತೃತ್ವದಲ್ಲಿ ಆಳಂದ ತಾಲೂಕ ಆಡಳಿತ ಸೌಧದ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಬೆಂಬಲವಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಎಸ್. ಗುತ್ತೇದಾರ್, ಲಿಂಗಾಯತ ಮಹಾಸಭೆಯ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಿವಪ್ರಕಾಶ್ ಹೀರಾ, ಆಳಂದ ಬಸವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ್ ಎಂ. ಪಾಟೀಲ್, ನ್ಯಾಯವಾದಿ ಬಾಬಾಸಾಹೇಬ್ ವಿ. ಪಾಟೀಲ್, ಪುರಸಭೆ ಸದಸ್ಯ ಶಿವಪುತ್ರ ನಡಿಗೇರಿ, ಸಿದ್ದುಗೌಡ ಹಿರೋಳಿ, ಹಿಂದೂ ಸಂಘಟನೆಯ ಕಾರ್ಯಕರ್ತ ಮಹೇಶ್ ಗೌಳಿ, ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಶ್ರೀಶೈಲ್ ಖಜೂರಿ, ಶರಣಗೌಡ ದೇವಂತಗಿ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಆಡಳಿತ ವಿರುದ್ಧ ಆಕ್ರೋಶ ಹೊರಹಾಕಿದರು.

ಗ್ರಾ.ಪಂ. ಸದಸ್ಯ ಶ್ರೀಶೈಲ ಚಿಚಕೋಟೆ, ಮುಖಂಢ ಶ್ರೀನಾಥ ಮೂಲಗೆ, ಸುರೇಶ ಡಿಗ್ಗಿ, ಮಾಣಿಕರಾಯ ಮೂಲಗೆ, ವೀರೆಂದ್ರ ಮಂಠಾಳೆ, ಕಾಶಿನಾಥ ಕೊಟ್ಟರಗಿ, ಧರ್ಮಣ್ಣ ಹಣಮಶೆಟ್ಟಿ, ಧರ್ಮಣ್ಣಾ ಹಣಮಶೆಟ್ಟಿ, ವಿಜಯಾನಂದ ಘಂಟೆ ಸೇರಿದಂತೆ ಅನೇಕರು ಭಾಗವಹಿಸಿದರು.

ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಬಸವೇಶ್ವರ ಪ್ರತಿಮೆಯನ್ನು ತಹಸೀಲ್ದಾರರು ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ ಹಠಾತಾಗಿ ಪೂಜೆ ಮಾಡುತ್ತೇವೆ ಎಂದು ತೆರವುಗೊಳಿಸಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇರಿಸಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

“ಸ್ಥಳದ ಕುರಿತು ಗ್ರಾಪಂ ಪಿಡಿಒನಿಂದ ಕೇವಲ ಸರ್ವೇ ನಡೆಸಲು ಅರ್ಜಿ ಸಲ್ಲಿಸಿದ್ದರೂ, ಸರ್ವೇ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ತಹಸೀಲ್ದಾರರು ಮತ್ತು ಪೊಲೀಸ್ ಅಧಿಕಾರಿಗಳು ಏಕಾಏಕಿ ಪ್ರತಿಮೆ ತೆರವುಗೊಳಿಸಿದ್ದು ಏಕೆ, ಇದು ಭಾವನೆಗಳಿಗೆ ಧಕ್ಕೆಯಾಗಿದೆ. ಸ್ಥಳದ ಸರ್ವೆ ಕೈಗೊಳ್ಳುವಂತೆ ಅರ್ಜಿ ಕೊಟ್ಟರೆ ಪ್ರತಿಮೆ ಏಕೆ ತೆರವುಗೊಳಿಸಲಾಗಿದೆ. ಪ್ರತಿಮೆ ತೆರವುಗೊಳಿಸುವಂತೆ ಯಾರ ಅರ್ಜಿಕೊಟ್ಟಿದ್ದಾರೆ. ಇದು ಅಧಿಕಾರಿಗಳಿಗೆ ಈ ಹಕ್ಕನ್ನು ಯಾರು ಕೊಟ್ಟರು?” ಎಂದು ಪ್ರಶ್ನಿಸಿದರು. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಬಸವಣ್ಣನವರನ್ನು ಹಾಗೂ ಅಭಿಮಾನಿಗಳನ್ನು ಅವಮಾನಿಸಿ ಮಾನಸಿಕವಾಗಿ ಘಾಸಿಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಅಣ್ಣಾರಾವ್ ಪಾಟೀಲ್ ಅವರು, “ಇನ್ನೂ ಎರಡು ಮೂರು ದಿನಗಳಲ್ಲಿ ಸರ್ವೇ ನಡೆಸಿ, ಸ್ಥಳ ಯಾರದೆಂಬುದನ್ನು ಸ್ಪಷ್ಟಪಡಿಸಲಾಗುವುದು” ಎಂದು ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ತೆರವುಗೊಳಿಸಿ ಗ್ರಾಪಂನಲ್ಲಿರಿಸಿದ ಪ್ರತಿಮೆಯನ್ನು ತಕ್ಷಣವೇ ಹಿಂತಿರುಗಿಸಬೇಕೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ವಶದಲ್ಲಿರುವ ಪ್ರತಿಮೆಯನ್ನು ತಕ್ಷಣ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಹರ್ಷಾನಂದ್ ಎಸ್. ಗುತ್ತೇದಾರ್ ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಗ್ರಾಮದ ಹಿರಿಯ ಮುಖಂಡರು, ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅಲ್ಲದೆ ತಾಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸ್ಥಳದಲ್ಲಿ ಗ್ರಾಮೀಣ ಸಿಪಿಐ ಪ್ರಕಾಶ ತಾತನೂರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

Join WhatsApp

Join Now

Leave a Comment

error: Content is Protected!