ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಜಿಡಗಾ ಮಠದಲ್ಲಿ 41ನೇ ಗುರುವಂದನಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ.

On: November 29, 2025 10:14 PM

ಆಳಂದ: ಶ್ರೀಕ್ಷೇತ್ರ ಜಿಡಗಾದ ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ 41ನೇ ಗುರುವಂದನಾ ಮಹೋತ್ಸವವು ಡಿಸೆಂಬರ್ 1 ಮತ್ತು 2, 2025ರಂದು ಜಿಡಗಾ ನವಕಲ್ಯಾಣ ಮಠದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಈ ಕುರಿತು ಶನಿವಾರ ಸಿದ್ಧತೆಯ ಬಗ್ಗೆ ಪ್ರಕಟಣೆ ನೀಡಿರುವ ಶ್ರೀಮಠವು – ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭು ಹಾಗೂ ಶ್ರೀ ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ದಿವ್ಯ ಪರಂಪರೆಯಲ್ಲಿ ಬೆಳಗುತ್ತಿರುವ, ಸಮಾಜ ಸೇವೆಯಲ್ಲಿ ತೊಡಗಿರುವ ಪರಮ ಪೂಜ್ಯ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಹಾನ್ ಆಧ್ಯಾತ್ಮಿಕ ಚೇತನ. ಈ ಗುರುವಂದನಾ ಮಹೋತ್ಸವವು ಕೇವಲ ಆಚರಣೆ ಮಾತ್ರವಲ್ಲ; ಸಮಾಜದ ನೊಂದವರಿಗೆ ಸ್ಪಂದಿಸುವ ಮಹಾಯಜ್ಞವೂ ಹೌದು ಎಂದು ತಿಳಿಸಿದೆ.


ಡಿ. 1ರ ಕಾರ್ಯಕ್ರಮ ಸರಮಾಲೆ

📌 ಬೆಳಗ್ಗೆ 9:50ಕ್ಕೆ
“ಭಾವೈಕ್ಯತೆಯ ಸಂತನ ಗುರುವಂದನೆ – ಭಾರತದ ಬಾವುಟಕ್ಕೆ ಸಮರ್ಪಣೆ” ಘೋಷವಾಕ್ಯದಡಿಯಲ್ಲಿ, ಜಿಡಗಾ ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಲಾದ 100 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭದ ಲೋಕಾರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ 18 ವಿಶೇಷ ತಂಡಗಳಿಂದ ಗೌರವ ವಂದನೆ ಸಲ್ಲಿಸಲಾಗುತ್ತದೆ.

ನಂತರ, ಶಿವಯೋಗಿ ಜ್ಞಾನ ಮಂದಿರ ಉಚಿತ ಶಿಕ್ಷಣ ವಸತಿ ನಿಲಯದ ನೂತನ ಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಪ್ರಸಾದ ನಿಲಯದ ಉದ್ಘಾಟನೆ ನಾಡಿನ ಪ್ರಮುಖ ಮಠಾಧೀಶರು, ಸಂತರು, ಮಹಾಂತರು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಲಿದೆ.

📌 ಸಂಜೆ 7:00ಕ್ಕೆ
ಖ್ಯಾತ ಹಿನ್ನೆಲೆ ಗಾಯಕ ಶ್ರೀ ಅನಿರುದ್ಧ ಶಾಸ್ತ್ರಿ ಹಾಗೂ ಶ್ರೀಮತಿ ಅಖೀಲಾ ಪಜಮಣ್ಣು ತಂಡದಿಂದ ಭಕ್ತಿಗೀತೆಗಳ ಗಾನಸುಧೆ ನಡೆಯಲಿದ್ದು, ವಿವಿಧ ಪುಣ್ಯಕ್ಷೇತ್ರಗಳಿಂದ ತರಲಾದ ಪವಿತ್ರ ಪೂಜಾ ಪ್ರಸಾದವನ್ನು ಪೂಜ್ಯರಿಗೆ ಸಮರ್ಪಿಸಲಾಗುತ್ತದೆ.


ಡಿ. 2ರಂದು ಗುರುವಂದನೆ

📌 ಬೆಳಗ್ಗೆ 7:00ಕ್ಕೆ
ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳ ಕರ್ತೃಗದ್ದುಗೆ ಮಹಾರುದ್ರಾಭಿಷೇಕ, ನಂತರ ಧರ್ಮಸಭೆ.

ಸಮಾಜಮುಖಿ ಹಾಗೂ ರೈತಪರ ಕಾರ್ಯಗಳಲ್ಲಿ ಶ್ರಮಿಸಿದವರಿಗೆ ವಿಶೇಷ ಗೌರವ–ಸನ್ಮಾನ, ನಂತರ ಪೂಜ್ಯರ ಆಶೀರ್ವಚನ.

ಮುಂದಾಗಿ 41ನೇ ಗುರುವಂದನಾ ಮಹೋತ್ಸವ, ಭರತನಾಟ್ಯ, ಚಂಡೆ ವಾದ್ಯ, ಮತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ.


ಪ್ರತಿ ವರ್ಷದಂತೆ ಈ ಬಾರಿಯೂ:

• ಆಸ್ಪತ್ರೆಯ ರೋಗಿಗಳಿಗೆ ಹಣ್ಣು–ಹಾಲು ವಿತರಣೆ

• ಬಡವರಿಗೆ ಉಚಿತ ಆರೋಗ್ಯ ಶಿಬಿರ

• ಅನಾಥ ಮಕ್ಕಳಿಗೆ ಅನ್ನ–ವಸ್ತ್ರ–ಪುಸ್ತಕ ವಿತರಣೆ

• ಕೃಷಿ ಮೇಳ

ಹಾಗೂ ಇನ್ನೂ ಡಜನ್‌ಗಟ್ಟಲೆ ಸೇವಾ ಕಾರ್ಯಕ್ರಮಗಳು ಜರುಗಲಿವೆ.

ಐದು ರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುವ ಈ ಭವ್ಯ ಕಾರ್ಯಕ್ರಮಕ್ಕೆ ಎಲ್ಲಾ ಸದ್ಭಕ್ತರನ್ನು ಆಹ್ವಾನಿಸಲಾಗಿದೆ.


ಗುರುವಂದನಾ ಸ್ವಾಗತ ಸಮಿತಿ ಸಂಪರ್ಕ:
📞 9980032009 | 9845222009


“ಈ ಗುರುವಂದನಾ ಮಹೋತ್ಸವವು ಆಧ್ಯಾತ್ಮ, ಸೇವೆ ಮತ್ತು ರಾಷ್ಟ್ರಭಕ್ತಿಯ ಮಹಾಸಂಗಮ. ಇತಿಹಾಸ ನಿರ್ಮಾಣದ ಈ ಸಂದರ್ಭದಲ್ಲಿ ಭಕ್ತರು ಪಾಲ್ಗೊಂಡು ದರ್ಶನ–ಆಶೀರ್ವಾದ ಪಡೆಯಬೇಕು” ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

Join WhatsApp

Join Now

Leave a Comment

error: Content is Protected!