ಆಳಂದ: ತಾಲೂಕು ಮಟ್ಟದ ಬೌದ್ಧ ಸಮ್ಮೇಳನವನ್ನು ಬೃಹತ್ ಮಟ್ಟದಲ್ಲಿ ಆಚರಿಸಲು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ 2ನೇ ಪೂರ್ವಭಾವಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಸಮ್ಮೇಳನವನ್ನು ಜನವರಿ 8ರ ಗುರುವಾರ ಆಳಂದದಲ್ಲಿ ಭವ್ಯವಾಗಿ ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಮುಖಂಡ ದಯಾನಂದ ಸೇರಿಕಾರ್ ವಹಿಸಿದ್ದರು. ತಾಲೂಕಿನ ಎಲ್ಲೆಡೆಯಿಂದ ಆಗಮಿಸಿದ ಅಂಬೇಡ್ಕರ್ ಅನುಯಾಯಿಗಳು, ಬೌದ್ಧ ಉಪಾಸಕರು, ಗ್ರಾಮ ಪಂಚಾಯಿತಿ ಹಾಲಿ-ಮಾಜಿ ಸದಸ್ಯರು, మాజీ ತಾಲೂಕು ಪಂಚಾಯಿತಿ ಸದಸ್ಯರು, ಸರ್ಕಾರಿ ನೌಕರರು ಹಾಗೂ ಸಮಾಜ ಬಾಂಧವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನದ ರೂಪು-ರೇಖೆ, ಕಾರ್ಯಕ್ರಮಗಳ ವಿನ್ಯಾಸ, ವೇದಿಕೆ ಸಿದ್ಧತೆ, ಹಣಕಾಸು ಸಂಗ್ರಹ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿ, ವಿವಿಧ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಪ್ರಮುಖ ಸಲಹಾ ಸಮಿತಿ ಅಧ್ಯಕ್ಷ ದಯಾನಂದ ಶೇರಿಕರ್, ಗೌರವ ಅಧ್ಯಕ್ಷ ಸಿದ್ದರಾಮ ಪ್ಯಾಟಿ, ಕಾರ್ಯಾಧ್ಯಕ್ಷ ಬಸಲಿಂಗಪ್ಪ ಗಾಯಕವಾಡ, ಪ್ರಚಾರ ಸಮಿತಿ ಅಧ್ಯಕ್ಷ ಆನಂದರಾಯ ಗಾಯಕವಾಡ, ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ ಮೂಲಭಾರತಿ ಉಳಿದಂತೆ ಉಪಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.
ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಈ ಸಮ್ಮೇಳನ ಆಳಂದ ತಾಲೂಕಿನ ಇತಿಹಾಸದಲ್ಲಿ ಮರೆಯಲಾಗದ ಘಟನೆಯಾಗಿ ಉಳಿಯುವಂತೆ ಆಯೋಜನೆಗೆ ಸರ್ವರು ಕೈಜೋಡಿಸೋಣಾ ಎಂಬುದು ಸೇರಿದಂತೆ ಸಭೆಯಲ್ಲಿ ಆದ ನಿರ್ಣಯಗಳ ಕುರಿತು ಸಮ್ಮೇಳನ ರೂವಾರಿ ದತ್ತಾತ್ರೇಯ ಕುಡಕಿ, ಚೆನ್ನವೀರ ಕಾಳೆಕಿಂಗೆ, ಭೋಜರಾಜ ಜುಭ್ರೆ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









