ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಕಲಬುರಗಿ ಬೌದ್ಧ ಧರ್ಮ ಸಮ್ಮೇಳನ: ಪೂರ್ವ ಸಿದ್ಧತೆ ಸಭೆಗೆ ಆಹ್ವಾನ.

On: September 30, 2025 8:22 PM

ಆಳಂದ: ಬುದ್ಧ ಗಯಾ ಮಾಹಾ ಬೋಧಿ ಮಾಹಾ ವಿಹಾರ ಮುಕ್ತಿ ಆಂದೋಲನದ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಪೂಜ್ಯ ಭಂತೆ ವಿನಾಚಾರ್ಯರ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿ ಬೌದ್ಧ ಧರ್ಮ ಸಮ್ಮೇಳನವನ್ನು ಆಯೋಜಿಸುವ ಉದ್ದೇಶವಾಗಿದೆ ಎಂದು ಬೆಳಮಗಿ ಬುದ್ಧ ವಿಹಾರದ ಭಂತೆ ಅಮರಜೋತಿ ತಿಳಿಸಿದ್ದಾರೆ.

ಈ ಕುರಿತು ವಿನಾಚಾರ್ಯರೊಂದಿಗೆ ಸಮಾಲೋಚನೆ ನಡೆಸಿ ವಿವರಣೆ ನೀಡಿದ ಅವರು, ಈ ಸಮ್ಮೇಳನದ ಪೂರ್ವ ಸಿದ್ಧತೆ ಸಭೆಯನ್ನು ಅಕ್ಟೋಬರ್ 5, 2025 ರಂದು ನಡೆಸಲಾಗುತ್ತಿದ್ದು, ಸರ್ವ ಬೌದ್ಧ ಹಿತೈಷಿ ಬಂಧು-ಮಿತ್ರರನ್ನು ಭಾಗವಹಿಸುವಂತೆ ಕರೆ ನೀಡಿದರು.

ಪೂಜ್ಯ ಭಂತೆ ವಿನಾಚಾರ್ಯರು ದೇಶಾದ್ಯಂತ ಪ್ರವಾಸದಲ್ಲಿರುವುದರಿಂದ, ಈ ಸಮ್ಮೇಳನವನ್ನು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಆಂದೋಲನದ ಮೂಲಕ ಬೌದ್ಧ ಧರ್ಮದ ಮಹತ್ವ, ಸಾಮಾನ್ಯ ಹಕ್ಕುಗಳು ಮತ್ತು ಸಾಮುದಾಯಿಕ ಸಾಮರಸ್ಯವನ್ನು ಒತ್ತಿ ಹೇಳುವ ಗುರಿ ಹೊಂದಿದ್ದು, ಸಂವಿಧಾನಿಕ ಮೌಲ್ಯಗಳನ್ನು ಬೌದ್ಧ ತತ್ವಗಳೊಂದಿಗೆ ಸಂಯೋಜಿಸುವ ಚರ್ಚೆಗೆ ಒತ್ತು ನೀಡಲಾಗುತ್ತದೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಬೌದ್ಧ ಅನುಯಾಯಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಧಾರ್ಮಿಕ ನಾಯಕರು ಭಾಗವಹಿಸಿ, ಸಮ್ಮೇಳನದ ಯಶಸ್ಸಿಗಾಗಿ ಯೋಜನೆ ರೂಪಿಸಬಹುದು ಎಂದು ತಿಳಿಸಿ, ಎಲ್ಲರ ಸಹಭಾಗಿತ್ವಕ್ಕಾಗಿ ಅವರು ಕೋರಿದರು.

ಈ ಸಮ್ಮೇಳನವು ಕಲಬುರಗಿ ಜಿಲ್ಲೆಯ ಬೌದ್ಧ ಸಮುದಾಯಕ್ಕೆ ಮಹತ್ವದ್ದಾಗಿದ್ದು, ಧಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹೆಚ್ಚಿನ ಮಾಹಿತಿಗಾಗಿ 9880100285 ಸಂಪರ್ಕಿಸಲು ಸಲಹೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಭಂತೆ ವಿನಾಚಾರ್ಯರು, ಹೋರಾಟಗಾರ ರಮೇಶ ಲೋಹಾರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Join WhatsApp

Join Now

Leave a Comment

error: Content is Protected!