ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಶಾಸಕ ಬಿ.ಆರ್. ಪಾಟೀಲ್ ಅವರಿಂದ 2 ಕೋಟಿ ರೂ. ಘೋಷಣೆ.

On: September 19, 2025 7:23 PM

ಆಳಂದ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಕಾರ್ಯಾಲಯದಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಶಾಸಕ ಬಿ.ಆರ್. ಪಾಟೀಲ್ ಉದ್ಘಾಟಿಸಿ ಮಾತನಾಡಿ, “ಗುರುವನ್ ನವೀಕರಣಕ್ಕಾಗಿ ಸುಮಾರು 2 ಕೋಟಿ ರೂಪಾಯಿಗಳನ್ನು ಕಟ್ಟಡ ಕಾಮಗಾರಿಗೆ ನೀಡುತ್ತೇನೆ. ಎಲ್ಲರೂ ಸಹಕರಿಸಿ ನಮ್ಮ ತಾಲೂಕಿನಲ್ಲಿ ಉತ್ತಮ ಕಟ್ಟಡವನ್ನು ನಿರ್ಮಿಸೋಣ. ಸಂಘವನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕು,” ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ್ ಮಾತನಾಡಿ, “ಈ ಬ್ಯಾಂಕ್ ಸುಮಾರು 32 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ನಾವೆಲ್ಲರೂ ಸೇರಿ ಇದನ್ನು ಉಳಿಸಿ ಬೆಳೆಸೋಣ,” ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಚಂದ್ರಶೇಖರ್ ಪೂಜಾರಿ ಮಾತನಾಡಿ, “ಈ ಬಾರಿ ಸುಮಾರು ಒಂದು ಕೋಟಿ ರೂಪಾಯಿ ಲಾಭಾಂಶ ಪಡೆದಿದ್ದೇವೆ. ಶಿಕ್ಷಕರಿಗೆ 8 ಲಕ್ಷ ರೂಪಾಯಿವರೆಗೆ ಶೇಕಡಾ 9ರಂತೆ ಸಾಲ ನೀಡುತ್ತಿದ್ದೇವೆ,” ಎಂದು ವಿವರಿಸಿದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ಸಂಘದ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, ಉಪಾಧ್ಯಕ್ಷ ರಾಜಕುಮಾರ್ ಕಾಂಬ್ಳೆ ಹಾಗೂ ಇನ್ನಿತರರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕರಾದ ಗೋದಾವರಿ ಪಾಟೀಲ್, ನರಸಪ್ಪ ಬಿರಾದಾರ್, ಮಹದೇವ ಗುಣಕಿ, ಶಂಕರ್ ಮೋಟಗಿ, ವಿಜಯಕುಮಾರ್ ಜಡೆಗೆ, ಶ್ರೀಶೈಲ್ ಮಾಡ್ಯಾಳೆ, ಮನ್ಸೂರ್ ಮುಜಾವರ, ಸೂರ್ಯಕಾಂತ್ ಮಂಡಲೆ, ಶಿವಶರಣಪ್ಪ ಉದನೂರ, ಸಂಜಯ್ ಕುಮಾರ್ ಖಜುರಿ, ಶೈಲಜಾ ಪುಮಾಜಿ, ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಸಾವಳೇಶ್ವರ ಶಾಲೆಯ ಮಕ್ಕಳಿಗೆ ವಿಶೇಷ ಕ್ರೀಡಾ ಸಾಧನ ಪ್ರಶಸ್ತಿಗಳನ್ನು ನೀಡಿ ಶಾಸಕರು ಸನ್ಮಾನಿಸಿದರು.

ನಿವೃತ್ತ ಶಿಕ್ಷಕರನ್ನು ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರನ್ನು ಸಹ ಸನ್ಮಾನಿಸಲಾಯಿತು.

ಸಭೆಯಲ್ಲಿ ವಾರ್ಷಿಕ ವರದಿ, 2024-25ನೇ ಸಾಲಿನ ಅಂದಾಜು ಆಯವ್ಯಯ, ಜಮಾ-ಖರ್ಚು, ಲಾಭ-ಹಾನಿ ವಿವರಗಳನ್ನು ಮಂಡಿಸಲಾಯಿತು. ನಿಧಿ ಮೊತ್ತವನ್ನು ನಿವೇಶನ ಕಟ್ಟಡ ನಿರ್ಮಾಣ ಮತ್ತು ನವೀಕರಣಕ್ಕಾಗಿ ಬಳಸುವುದಕ್ಕೆ ಸದಸ್ಯರಿಂದ ಒಪ್ಪಿಗೆ ದೊರಕಿತು. ಸಂಘದ ವ್ಯವಹಾರಗಳನ್ನು ಡಿಜಿಟಲ್ ಮಾಡುವ ಕುರಿತು ಚರ್ಚೆ ನಡೆಯಿತು.

ಆರಂಭದಲ್ಲಿ ಉಪಾಧ್ಯಕ್ಷ ರಾಜಕುಮಾರ್ ಕಾಂಬ್ಳೆ ಭಾವಚಿತ್ರ ಪೂಜೆ ನೆರವೇರಿಸಿದರು. ಸಂಗಮೇಶ್ ಶಾಸ್ತ್ರಿಜಿ ಮತ್ತು ಗೋದಾವರಿ ಪಾಟೀಲ್ ತಂಡ ಪ್ರಾರ್ಥನಾ ಗೀತೆಯನ್ನು ನಡೆಸಿಕೊಟ್ಟರು. ಮಹದೇವ ಗುಣಕಿ ಮತ್ತು ಶಂಕರ್ ಮೋಟಗಿ ನಿರೂಪಣೆ ಮಾಡಿದರು. ಶೈಲಜಾ ಪುಮಾಜಿ ಸ್ವಾಗತಿಸಿದರು.

Join WhatsApp

Join Now

Leave a Comment

error: Content is Protected!