ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಹಜರತ್ ಮಹ್ಮದ್ ಪೈಗಂಬರರ 1500ನೇ ವರ್ಷದ ಜನ್ಮದಿನಾಚರಣೆ ಧಾರ್ಮಿಕ–ಸಾಮಾಜಿಕ ಸೌಹಾರ್ದ ಸಂದೇಶ ಹಬ್ಬಿಸಿದ ಉಲ್ಮಾ ಕೌನ್ಸಿಲ್.

On: September 10, 2025 5:57 PM

ಆಳಂದ: ಪಟ್ಟಣದ ಉಲ್ಮಾ ಕೌನ್ಸಿಲ್ ಆಶ್ರಯದಲ್ಲಿ ಹಜರತ್ ಮಹ್ಮದ್ ಪೈಗಂಬರರ 1500ನೇ ವರ್ಷದ ಜನ್ಮದಿನಾಚರಣೆ ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಜರುಗಿತು. ಈ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಸೇರಿ ಐದು ಖಾಸಗಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು – ಹಂಫಲಗಳನ್ನು ವಿತರಿಸಿ ಮಾನವೀಯ ಸೇವೆಯ ಮಾದರಿಯನ್ನು ಪ್ರದರ್ಶಿಸಲಾಯಿತು.

ಅಲ್ಲದೆ, ಹಜರತ್ ಲಾಡ್ಲೆ ಮಶಾಕ ದರ್ಗಾ ಆವರಣ ಹಾಗೂ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದ್ದು ಪರಿಸರ ಸಂರಕ್ಷಣೆಗೂ ಒತ್ತು ನೀಡಲಾಯಿತು.

ಕಾರ್ಯಕ್ರಮದಲ್ಲಿ ಧಾರ್ಮಿಕ ಬೋಧನೆಯನ್ನು ನೀಡಿದ ಮುಸ್ತಾಕ್ ಮಿಜ್ಜಭಾಯಿ ಮೌಲಾನಾ ಅವರು ಮಾತನಾಡಿ, “ಹಜರತ್ ಮಹ್ಮದ್ ಪೈಗಂಬರರು ತಮ್ಮ ಜೀವನದಲ್ಲಿ ಮಾನವ ಸೇವೆಯನ್ನೇ ಧರ್ಮವೆಂದು ಬೋಧಿಸಿದ್ದರು. ಬಡವರಿಗೆ ನೆರವಾಗುವುದು, ರೋಗಿಗಳಿಗೆ ತಾಯಿಯಂತಾಗುವುದು, ಪರಿಸರವನ್ನು ಸಂರಕ್ಷಿಸುವುದು ಇವೆಲ್ಲವೂ ಪೈಗಂಬರರ ಮಾರ್ಗದರ್ಶನದ ನಿಜವಾದ ಅರ್ಥ. ಇಂದಿನ ಈ ಕಾರ್ಯಕ್ರಮವು ಆ ಸಂದೇಶವನ್ನು ಜೀವಂತವಾಗಿಟ್ಟಿದೆ” ಎಂದು ಹೇಳಿದರು.

“ಧರ್ಮವು ಕೇವಲ ಆಚರಣೆಗಾಗಿ ಮಾತ್ರವಲ್ಲ, ಮಾನವ ಸಮಾಜದ ಕಲ್ಯಾಣಕ್ಕಾಗಿ ಇರಬೇಕು. ಪೈಗಂಬರರ ತತ್ವಗಳನ್ನು ಅನುಸರಿಸಿದರೆ ಸಮಾಜದಲ್ಲಿ ಸೌಹಾರ್ದ, ಸಹಬಾಳ್ವೆ ಮತ್ತು ಸಮಾನತೆಯ ಬೆಳವಣಿಗೆ ಸಾಧ್ಯ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಲ್ಮಾ ಕೌನ್ಸಿಲ್ ಅಧ್ಯಕ್ಷ ಯುನುಸ್ ಮೌಲಾನಾ, ಇದ್ರೀಸ್ ಅನ್ಸಾರಿ ಮೌಲಾನಾ, ರಬ್ಬಾನಿ ಅನ್ಸಾರಿ ಮೌಲಾನಾ, ಬಾಖರ್ ಅಲಿ ಜಮಾದಾರ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ, ಹಿರಿಯ ಫಕ್ರೋದ್ದೀನ್ ಗೋಳಾ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಲಾಡ್ಲೆ ಮಶಾಸಕ ದರ್ಗಾ ಆವರಣದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಕಿಸಾನ ಸಭೆಯ ರಾಜ್ಯ ಮುಖಂಡ ಮೌಲಾ ಮುಲ್ಲಾ ಹಾಗೂ ದರ್ಗಾ ಕಮೀಟಿ ಕಾರ್ಯದರ್ಶಿ ಖಲಿಲ್ ಅನ್ಸಾರಿ, ಬಾಕರ್ ಅಲಿ ಜಮಾದಾರ ಸೇರಿ ಮೌಲಾನಾ ಅವರಗಳು ಭಾಗವಹಿಸಿದ್ದರು.

Join WhatsApp

Join Now

Leave a Comment

error: Content is Protected!