ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೆ.17ರಂದು ಆಳಂದ ಭೇಟಿ – ಪಕ್ಷ ಕಚೇರಿ ಉದ್ಘಾಟನೆ, ಹಿಂದೂ ಸಮಾವೇಶದಲ್ಲಿ ಪಾಲ್ಗೊಳ್ಳಲು.

On: August 31, 2025 3:03 PM

ಆಳಂದ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರದ ಶಾಸಕ ಬಿ.ವೈ. ವಿಜೇಯೇಂದ್ರ ಸೆಪ್ಟೆಂಬರ್ 17ರಂದು ಆಳಂದಕ್ಕೆ ಆಗಮಿಸಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 11:00 ಗಂಟೆಗೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತೀಯ ಜನತಾ ಪಕ್ಷದ ಕಚೇರಿಯನ್ನು ಉದ್ಘಾಟನೆ ಮಾಡಲಿದ್ದು, ನಂತರ ಮಧ್ಯಾಹ್ನ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದಿ. ಅಣ್ಣಾರಾವ ವೀರಭದ್ರಪ್ಪ ಪಾಟೀಲ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಾಯಂಕಾಲ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಹಿಂದೂ ಮಹಾಗಣಪತಿಯ ದಶಮಾನೋತ್ಸವ ಹಾಗೂ ಬೃಹತ್ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡುವರು. ಈ ಸಮಾವೇಶದಲ್ಲಿ ಗದಗದ ಜಗದ್ಗುರು ಸದಾಶಿವ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.

ಇದರ ಭಾಗವಾಗಿ, ಶನಿವಾರ ಬೆಂಗಳೂರಿನಲ್ಲಿ ಗುತ್ತೇದಾರ ನೇತೃತ್ವದ ನಿಯೋಗ ವಿಜೇಯೇಂದ್ರರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ಸಲ್ಲಿಸಿ ಆಹ್ವಾನ ನೀಡಿತು. ನಿಯೋಗದಲ್ಲಿ ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರು ಮಹೇಶ ಗೌಳಿ ಮತ್ತು ಶಿವಪ್ರಕಾಶ ಹೀರಾ ಇದ್ದರು.

Join WhatsApp

Join Now

Leave a Comment

error: Content is Protected!