ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಮದಗುಣಕಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ.

On: August 17, 2025 12:37 PM

ಆಳಂದ್: ತಾಲೂಕಿನ ಮರುಗುಣಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಉತ್ಸಾಹ ಮತ್ತು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸೈನಿಕರಾದ ಕರ್ತವ್ಯ ನಿರತ ಗುರುಭೀಮರಾಯ ಪರೀಟ (ಎಸ್, ಸಿಆರ್‍ಪಿಎಫ್) ಮತ್ತು ನಿವೃತ್ತ ಸೈನಿಕ ಗಣಪತಿ ಪರೀಟ (ಎಎಸ್‍ಐ, ಸಿಆರ್‍ಪಿಎಫ್), ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಶಾಲಾ ಮುಖ್ಯಗುರು ಬಸಣ್ಣ ಸಿಗರಕಂಟಿ ಮಾತನಾಡಿ, “ಸ್ವಾತಂತ್ರ್ಯದ ಮೌಲ್ಯವನ್ನು ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಪ್ರಭುಲಿಂಗ ಪಾಟೀಲ, ಸದಸ್ಯರಾದ ಸಂತೋಷ ಆಳಂದ, ಶ್ರೀಶೈಲ ಮಡ್ಡೆ, ಪ್ರಭಾವತಿ ಮೇಳಕುಂದಿ, ಕರವೇ ಅಧ್ಯಕ್ಷ ಮಹಾಂತೇಶ ಸಣ್ಣಮನಿ, ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಲ್ಲಿನಾಥ ಹೀಳಿ, ಹಣಮಂತ ಸಣ್ಣಮನಿ, ಬಸಣ್ಣ ಮೇಳಕುಂದಿ ಸೇರಿದಂತೆ ಹಿರಿಯರು, ಯುವಕರು, ಪಾಲಕರು ಭಾಗವಹಿಸಿದ್ದರು. ಶಿಕ್ಷಕರು, ಬಿಸಿಯೂಟದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮಗಳು ದೇಶಭಕ್ತಿಯ ಗೀತೆಗಳು, ನೃತ್ಯ, ನಾಟಕ ಮತ್ತು ಭಾಷಣಗಳ ಮೂಲಕ ವಿದ್ಯಾರ್ಥಿಗಳು ಸ್ವಾತಂತ್ರ್ಯದ ಮಹತ್ವವನ್ನು ಸಾರಿದರು. ಅಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಲಾಯಿತು.

ಸೈನಿಕರಾದ ಶ್ರೀ ಗುರುಭೀಮರಾಯ ಪರೀಟ ಮತ್ತು ಶ್ರೀ ಗಣಪತಿ ಪರೀಟ ಅವರಿಗೆ ಶಾಲೆಯ ವತಿಯಿಂದ ವಿಶೇಷ ಸನ್ಮಾನವನ್ನು ನೀಡಿ, ಅವರ ದೇಶಸೇವೆಯನ್ನು ಕೊಂಡಾಡಲಾಯಿತು.

Join WhatsApp

Join Now

Leave a Comment

error: Content is Protected!