ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಜಾಗತಿಕ ಮೌಲ್ಯಗಳಲ್ಲಿ ಬೇರೂರಿದೆ ಭಾರತದ ಸ್ಥಾನಮಾನ: ಎನ್‌ಎಚ್‌ಆರ್‌ಸಿ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್.

On: August 13, 2025 5:56 PM

ಆಳಂದ: “ಭಾರತದ ಜಾಗತಿಕ ಸ್ಥಾನಮಾನವು ಅದರ ಮೃದು ಶಕ್ತಿಯಲ್ಲಿ ಆಳವಾಗಿ ಬೇರೂರಿದೆ. ಪ್ರಜಾಪ್ರಭುತ್ವ, ಮುಕ್ತ ಚುನಾವಣೆಗಳು, ಮಾನವ ಹಕ್ಕುಗಳು, ಪರಿಸರ ಸಂರಕ್ಷಣೆ ಮುಂತಾದ ಸಾಂವಿಧಾನಿಕ ಮೌಲ್ಯಗಳು ನಮ್ಮ ದೇಶದ ಅಸ್ತಿತ್ವದ ಕೇಂದ್ರಬಿಂದು” ಎಂದು ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಪ್ರಧಾನ ಕಾರ್ಯದರ್ಶಿ ಶ್ರೀ ಭರತ್ ಲಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಕಡಗಂಚಿ ಬಳಿಯ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗವು ಆಯೋಜಿಸಿದ್ದ “ಸೂಕ್ಷ್ಮ ನಿರೂಪಣೆಯಿಂದ ಶ್ಠೂಲ ನಿರೂಪಣೆಯಡೆಗೆ ಜಾಗತೀಕೃತ ಜಗತ್ತಿನಲ್ಲಿ ಅಪರಾಧ ನ್ಯಾಯಶಾಸ್ತ್ರವನ್ನು ಮರುಕಲ್ಪಿಸುವುದು” ಎಂಬ ಆನ್‌ಲೈನ್ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶತಮಾನಗಳಿಂದ ಪೋಷಿಸಲ್ಪಟ್ಟ ಈ ಮೌಲ್ಯಗಳು ಅಂತರರಾಷ್ಟ್ರೀಯ ಕಾನೂನು ಚೌಕಟ್ಟುಗಳೊಂದಿಗೆ ಪ್ರತಿಧ್ವನಿಸುತ್ತವೆ ಎಂದು ಉಲ್ಲೇಖಿಸಿದ ಅವರು, “ಜೈಲುಗಳಲ್ಲಿ ಖೈದಿಗಳ ದಟ್ಟಣೆ, ಹೆಚ್ಚುತ್ತಿರುವ ವಿಚಾರಣಾಧೀನ ಕೈದಿಗಳ ಪ್ರಮಾಣ ಹಾಗೂ ಸಮಾಜದ ಅಂಚಿನಲ್ಲಿರುವವರ ಧ್ವನಿಯನ್ನು ಸಂಸತ್ತಿನ ಆಧಾರಸ್ತಂಭಗಳಿಗೆ ಸೇತುವೆ ಮಾಡುವಂತಹ ನ್ಯಾಯಶಾಸ್ತ್ರದ ಅಗತ್ಯ” ಎಂಬ ಗಂಭೀರ ವಿಷಯಗಳತ್ತ ಗಮನ ಹರಿಸಬೇಕೆಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್.ಎಸ್. ಮಿತ್ತಲ್ಕೋಡ್ ಅವರು ಸಮ್ಮೇಳನದಲ್ಲಿ ಮಂಡಿಸಲಾದ ವೈವಿಧ್ಯಮಯ ಸಂಶೋಧನಾ ಲೇಖನಗಳ ಸಂಗ್ರಹವನ್ನು ಬಿಡುಗಡೆ ಮಾಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು “2047ರೊಳಗೆ ವಿಕಸಿತ ಭಾರತ ನಿರ್ಮಾಣದ ಕನಸನ್ನು ನನಸಾಗಿಸಲು ಕೌಶಲ್ಯಪೂರ್ಣ ಹಾಗೂ ಪ್ರಗತಿಪರ ವಕೀಲರ ಅಗತ್ಯ ತುರ್ತು” ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ನಂತರ, ಸಮ್ಮೇಳನವು ಜಾಗತಿಕ ಹಾಗೂ ತುಲನಾತ್ಮಕ ಅಪರಾಧ ನ್ಯಾಯಶಾಸ್ತ್ರ, ಡಿಜಿಟಲ್ ಅಪರಾಧಶಾಸ್ತ್ರ, ಹಾಗೂ ಅಂತರಶಿಸ್ತೀಯ ಪರಿಗಣನೆಗಳಂತಹ ವಿಷಯಗಳನ್ನು ಒಳಗೊಂಡ ಆರು ತಾಂತ್ರಿಕ ಗೋಷ್ಠಿಗಳೊಂದಿಗೆ ನಡೆಯಿತು.

ಮಾರಿಷಸ್, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಭಾರತದ ಪ್ರಾಧ್ಯಾಪಕರು, ವಿದ್ವಾಂಸರು, ಮತ್ತು ವೃತ್ತಿಪರರು ಉತ್ಸಾಹಭರಿತವಾಗಿ ಪಾಲ್ಗೊಂಡ ಈ ಸಮ್ಮೇಳನದಲ್ಲಿ ಆಯ್ದ 40 ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಲಾಯಿತು.

Join WhatsApp

Join Now

Leave a Comment

error: Content is Protected!