ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಶಾಲೆಗಳಲ್ಲಿ ಕೊರತೆಯ ದೈಹಿಕ ಶಿಕ್ಷಣದ ಶಿಕ್ಷಕರ ನೇಮಕಾತಿ ನಡೆಯಲಿ

On: August 9, 2025 4:49 PM

ಆಳಂದ: ಶಾಲೆಗಳಲ್ಲಿನ ಕೊರತೆಯಿರುವ ದೈಹಿಕ ಶಿಕ್ಷಣದ ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಮಕ್ಕಳ ಕ್ರೀಡಾ ಉತ್ತೇಜನ ಮೂಲಕ ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ತಾಲೂಕಿನ ಸಾವಳೇಶ್ವರ ಗ್ರಾಮದಲ್ಲಿ ನಡೆದ ಮಾದನಹಿಪ್ಪರಗಾ ವಲಯ ಮಟ್ಟದ ಶಿಕ್ಷಣ ಇಲಾಖೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು ಹದಿನೈದು ವರ್ಷಗಳಿಂದ ರಾಜ್ಯದ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗಿಲ್ಲ, ಸಿಪಿಎಡ್ ಬಿಪಿಎಡ್ ಕಲಿತವರು ಸುಮಾರು 2 ಲಕ್ಷ ಜನ ರಾಜ್ಯದಲ್ಲಿದ್ದಾರೆ ಸುಮಾರು 45 ಸಾವಿರ ಕ್ಕಿಂತಲೂ ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ ರಾಜ್ಯದಲ್ಲಿ 60ಲಕ್ಷ ಮಕ್ಕಳು ಆಟಗಳಿಂದ ವಂಚಿತರಾಗುತ್ತಿದ್ದಾರೆ ಆಳಂದ ತಾಲೂಕಿನಲ್ಲಿ ಸುಮಾರು 40 ರಿಂದ 50 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ ಅದಕ್ಕಾಗಿ ಸರ್ಕಾರ ದೈಹಿಕ ಶಿಕ್ಷಕರ ನೇಮಕಾತಿ ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ವೈಜನಾಥ ಝಳಕಿ ಮಾತನಾಡಿ, ಒಬ್ಬ ಒಳ್ಳೆಯ ಕ್ರೀಡಾಪಟುವನ್ನು ತಯಾರು ಮಾಡುವಂತಹ ಜವಾಬ್ದಾರಿ ದೈಹಿಕ ಶಿಕ್ಷಕರ ಮೇಲಿದೆ,ದೈಹಿಕ ಶಿಕ್ಷಕರು ಆ ಶಾಲೆಯ ಮೂಗು ಇದ್ದಂತೆ, ಯೋಗ, ಆರೋಗ್ಯ ಶಿಕ್ಷಣ ಆಟೋಟಗಳು ನಡೆಯುವದೆ ದೈಹಿಕ ಶಿಕ್ಷಕರಿಂದ. ನಮ್ಮ ವಲಯದ ಮಕ್ಕಳು ಜಿಲ್ಲೆಯಲ್ಲಿ ಸಾಧಿಸುವಂತಾಗಲಿ ಎಂದರು.

ಚಂದ್ರಶೇಖರ್ ಪೂಜಾರಿ ಮಾತನಾಡಿ, ತಾಲೂಕಿನಲ್ಲಿ ಹಿಕ ಶಿಕ್ಷಕರಿಗೆ ಬಡ್ತಿ ಕೂಡ ಮಾಡಿಲ್ಲ. ಹತ್ತು ಆಸ್ಪತ್ರೆಗಳನ್ನು ತೆರೆಯುವುದಕ್ಕಿಂತ ಒಂದು ಕ್ರೀಡಾಂಗಣವನ್ನು ತೆರೆಯುವುದು ಲೇಸು, ಹಾಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಸಾವಳೇಶ್ವರ ಗ್ರಾಪಂ ಅಧ್ಯಕ್ಷ ಹಿರಗಪ್ಪ ಕೆರಮಗಿ, ಉಪಾಧ್ಯಕ್ಷ ರಾಜಕುಮಾರ ಝಳಕಿ, ಮುನ್ನೊಳ್ಳಿ ಗ್ರಾಪಂ ಅಧ್ಯಕ್ಷ ರಾಜಕುಮಾರ ಚವ್ಹಾಣ, ಆನಂದ ದೇಶಮುಖ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸತೀಶ ಷಣ್ಮೂಖ, ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ, ಮರೆಪ್ಪ ಬಡಿಗೇರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿನಾಥ ಖಜೂರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ಮತ್ತಿತರರು ಭಾಗವಹಿಸಿದ್ದರು.

ಕ್ರೀಡಾಪಟುಗಳಿಗೆ ಶಿವಲಿಂಗಪ್ಪ ನೆಲ್ಲಗಿ ಟ್ರೋಪಿ ನೀಡಿದರು. ಶ್ರೀಶೈಲ ಸುತಾರ ಮುನ್ನೊಳಿ ಟಿ. ಶರ್ಟ್ ದಾನಗೈದರು. ಕೆಎಂಎಫ್ ಅಧ್ಯಕ್ಷರಿಂದ 500 ಕ್ರೀಡಾಪಟುಗಳು 1,000 ನಂದಿನಿ ಹಾಲಿನ ಪ್ಯಾಕೆಟ್ ಮಜ್ಜಿಗೆಯನ್ನು ಕೆಎಂಎಫ್ ಅಧ್ಯಕ್ಷರು ಒದಗಿಸಿದರು.

ಪ್ರಾಸ್ತಾವಿಕವಾಗಿ ಶಿಕ್ಷಕ ಚಂದ್ರಶೇಖರ ಪೂಜಾರಿ ಮಾತನಾಡಿದರು. ಶರಣಬಸಪ್ಪ ವಡಗಾಂವ ನಿರೂಪಿಸಿದರು. ದೈಹಿಕ ಶಿಕ್ಷಕ ಮಹಾದೇವ ಗುಣಕಿ ಸ್ವಾಗತಿಸಿದರು. ಪ್ರೌಢಶಾಲೆ ದೈಹಿಕ ರಾಜಕುಮಾರ ಕೇರೂರ ವಂದಿಸಿದರು.

ಬಳಿಕ ನಡೆದ ಕ್ರೀಡಾಕೂಟದಲ್ಲಿ ಸಾವಳೇಶ್ವರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗುಂಪು ಆಟಗಳಾದ ಬಾಲಕರ ಥ್ರೋ ಬಾಲ್, ಬಾಲಕಿಯರ ಕಬಡ್ಡಿ ಮತ್ತು ಬಾಲಕಿಯರ ವಾಲಿಬಾಲ್‍ನಲ್ಲಿ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿ ಕೀರ್ತಿ ತಂದರು.

ಈ ಸಾಧನೆಗೆ ಶಾಲೆಯ ಮುಖ್ಯ ಗುರು ದಯಾನಂದ ಮೈಂದರಗಿ, ಶಿಕ್ಷಕರಾದ ಪೀರಪ್ಪ, ರಾಜಶೇಖರ, ಬಸಮ್ಮ, ಶಿವಲೀಲಾ, ಶ್ರೀಕಾಂತ್, ಪರಮೇಶ್ವರ್, ಶರಣಪ್ಪ ಘೋಡಕೆ, ಜಯಶ್ರೀ ಮತ್ತು ಅರ್ಚನಾ ಇವರ ಮಾರ್ಗದರ್ಶನ ಕಾರಣವಾಗಿದೆ. ಗ್ರಾಮದ ಶಿವಲಿಂಗಪ್ಪ ನೆಲ್ಲಗಿ, ವಿಜಯಕುಮಾರ ಜಿಡಗೆ, ಶ್ರೀಶೈಲ ಸುತಾರ, ಸತೀಶ್ ಖಜುರೆ ಮತ್ತು ಶಿವಶರಣಪ್ಪ ಮುರುಮ ಇವರು ಕಾರ್ಯಕ್ರಮಕ್ಕೆ ದೇಣಿಗೆ ಮತ್ತು ಸಹಕಾರ ನೀಡಿದರು ಎಂದು ದೈಹಿಕ ಶಿಕ್ಷಕ ಮಹಾದೇವ ಗುಣಕಿ ಅವರು ಹೇಳಿಕೊಂಡರು.

ಮಾದನಹಿಪ್ಪರಗಾ, ಮದಗುಣಕಿ, ಹಿರೋಳ್ಳಿ, ಸರಸಂಬಾ, ಅಂಬೆವಾಡ, ಬಿಮಪುರ, ಪಡಸಾವಳಿ, ಸವಳೇಶ್ವರ ಮುಂತಾದ ಗ್ರಾಮಗಳಿಂದ ಕ್ರೀಡಾಪಟುಗಳು ಭಾಗವಹಿಸಿ ಕ್ರೀಡಾ ಪ್ರದರ್ಶನ ದೈಹಿಕ ಶಿಕ್ಷಕರ ಸಮೂಹ ಶ್ರಮಿಸಿತು.

Join WhatsApp

Join Now

Leave a Comment

error: Content is Protected!