ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್‍ನಿಂದ ಶಾಲಾ ಸಂಸತ್ತಿನ ಚುನಾವಣೆ.

On: August 7, 2025 7:10 PM

ಅಳಂದ: ಪಟ್ಟಣದ ಹೆಬ್ಬಳಿ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್‌ನ ಆಶ್ರಯದಲ್ಲಿ ಗುರುವಾರ ವಿದ್ಯಾರ್ಥಿನಿಯರಿಗೆ ಮತದಾನದ ಮಹತ್ವ ಮತ್ತು ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲೇಜು ಹಂತದ ಶಾಲಾ ಸಂಸತ್ತಿನ ಚುನಾವಣೆ ಯಶಸ್ವಿಯಾಗಿ ನಡೆಯಿತು.

ಈ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ಆಧರಿತ ಮಾದರಿಯಲ್ಲೇ, ಟ್ಯಾಬ್‌ಗಳನ್ನು ವಿದ್ಯುನ್ಮಾನ ಯಂತ್ರಗಳಂತೆ ಬಳಸಿ ನಿಜವಾದ ಚುನಾವಣೆಯ ಮಾದರಿಯಾಗಿ ಆಯೋಜಿಸಲಾಯಿತು.

ವಿಶೇಷವಾಗಿ, ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರೇ ಮತದಾರರಾಗಿದ್ದರಿಂದ ಈ ಮತಗಟ್ಟೆಯನ್ನು ‘ಪಿಂಕ್ ಮತಗಟ್ಟೆ’ ಎಂದು ಗುರುತಿಸಲಾಗಿತ್ತು.

ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಕಾಲೇಜಿನ ಪ್ರಾಚಾರ್ಯೆ ಜೋಹರಾ ಫಾತಿಮಾ ಅವರು ಪಿಆರ್‌ಒ ಆಗಿ ನಿರ್ವಹಿಸಿದರೆ, ಇತಿಹಾಸ ಉಪನ್ಯಾಸಕಿ ರೈಸಾ ಬಾನು ಎಪಿಆರ್‌ಒ ಆಗಿ, ಕುಮಾರಿ ರೇಣುಕಾ ಮತ್ತು ನಿರ್ಮಲಾ ಪೀಠಾಅಧಿಕಾರಿಗಳಾಗಿ ಹಾಗೂ ಅತಿಥಿ ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು.

ಚುನಾವಣೆಯ ಯಶಸ್ವಿಗೆ ಮಂಜುನಾಥ್, ಶಿವರಾಜ್ ಚವ್ಹಾಣ್, ಮಲ್ಲಿಕಾರ್ಜುನ, ರಫಿಯೋದ್ದೀನ್, ಪ್ರಥಮ ದರ್ಜೆ ಸಹಾಯಕ ರಾಹುಲ್ ಬಂಡಗಾರ ಅವರು ಸಕ್ರಿಯವಾಗಿ ಸಹಕರಿಸಿದರು.

ವಿದ್ಯಾರ್ಥಿನಿಯರು ತಮ್ಮ ಆಧಾರ್ ಕಾರ್ಡ್‌ಗಳೊಂದಿಗೆ ಮತಗಟ್ಟೆಗೆ ಆಗಮಿಸಿ ನಿಜವಾದ ಚುನಾವಣೆಯಂತೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಫಲಿತಾಂಶವನ್ನು ಘೋಷಿಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ಅರಿತುಕೊಳ್ಳಲು ಹಾಗೂ ಜನಾಭಿಪ್ರಾಯದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತು.

ಈ ಮಾದರಿ ಚುನಾವಣೆಯು ಯುವ ಮತದಾರರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಭಾರತ ಚುನಾವಣಾ ಆಯೋಗದ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಉಪನ್ಯಾಸಕ ಶ್ರೀಶೈಲ ಮಾಳಗೆ ಅವರು ವಿವರಿಸಿದರು.

Join WhatsApp

Join Now

Leave a Comment

error: Content is Protected!