ಆಳಂದ: ಮಾಡಲು ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ತಾಲೂಕಿನ ಭೂಸನೂರಿನ ರೈತ ಗುರುಶಾಂತ ವಿಜಯಕುಮಾರ ಪಾಟೀಲ ಅವರು ತಮ್ಮ ಮುಳ್ಳು ಕಂಟಿಗಳಿಂದ ಕೂಡಿದ ಇಳಿಜಾರಿನ ದೊಡ್ಡ ಗುಡ್ಡವನ್ನೇ ಆಯ್ಕೆಮಾಡಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆದಿದ್ದು ಅಲ್ಲದೆ, ನಿಸರ್ಗದ ಸೊಬಗನ್ನು ಹೆಚ್ಚಿಸುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.
ಭೂಸನೂರ ಗ್ರಾಮದಿಂದ ಜಳಕಿ ರಸ್ತೆಯಲ್ಲಿ ಬರುವ ತಮ್ಮ 8 ಎಕರೆ ಗುಡ್ಡದಲ್ಲಿ ಸದ್ಯ 3 ಎಕರೆ ಡ್ಯ್ರಾಗನ್ ಬೆಳೆದಿದ್ದು, ಒಂದು ಎಕರೆ ಕಬ್ಬು ಬೆಳೆದಿದ್ದು, ಇನ್ನೂಳಿದ ಜಮೀನಿನಲ್ಲಿ ವಿವಿಧ ಹಣ್ಣುಗಳ ಬೆಳೆ ಬೆಳೆಯಲು ಗುಡ್ಡ ಸಜ್ಜುಗೊಳಿಸಿದ್ದಾರೆ.

ಹತ್ತಿ ಹೋಗಲು ಚಾನ್ಸೆಯಿಲ್ಲದ ಗುಡ್ಡ, ಮೇಲಾಗಿ ದನಗಳು ಹೋಗಿ ಮೇಯಲು ಬಾರದಷ್ಟು ಖಡಿಯಾದ(ಎತ್ತರ) ಗುಡ್ಡದ ಪ್ರದೇಶಕ್ಕೆ ಸಂಚರಿಸಲು ಸ್ವಂತ ಖರ್ಚು ಮಾಡಿ ರಸ್ತೆ ಮಾಡಿಕೊಂಡಿದ್ದು, ಗುಡ್ಡದಲ್ಲಿ ನಿಂತುಕೊಳ್ಳಲು ಆಗದೆ ಜಾರಿ ಬೀಳುವಷ್ಟು ಅವಗಡದಂತ ಸುಮಾರು ಸಾವಿರ ಅಡ್ಡಿ ಎತ್ತರದ ಗುಡ್ಡವನ್ನೇ ಆಯ್ಕೆಮಾಡಿದ್ದು ಅಲ್ಲದೆ, ಈ ಗುಡ್ಡವನ್ನು ವಿಕೃತಿ ಗೊಳಿಸಿದೆ, ಅಗೆದು ಸಮತಟ್ಟು ಮಾಡದೆ ಇದ್ದ ಯತ್ತಾವಥಾದ ಸ್ಥಿತಿಯಲ್ಲೇ ಬೆಳೆನಾಟಿಗೆ ಬೇಕಾದಷ್ಟ ಸಾಲುಗಳು ಮಾಡಿಕೊಂಡಿದ್ದು ಬಿಟ್ಟರೆ, ಗುಡ್ಡದ ಅಂದಗೆಡಿಸಿದೆ ಕೈಗೊಂಡ ಬೆಳೆಯಿಂದ ನಿಸರ್ಗಕ್ಕೆ ಋಣಿಯಾಗಿದ್ದಾರೆ.
ಈಗ ಗಡ್ಡದಲ್ಲಿ ಬೆಳೆದ ಡ್ಯ್ರಾಗನ್ ಬೆಳೆ ಹತ್ತಾರು ಕಿ.ಮೀ. ದೂರದಿಂದಲೂ ನೋಡಗರ ಕಣ್ಣಿಗೆ ಕಾಣುವಂತಾಗಿ ಗಮನ ಸೆಳೆದಿದೆ.

ಗುಡ್ಡವನ್ನೇ ಆಯ್ಕೆ: ಭೂಸನೂರಿನ ರೈತ ಗುರುಶಾಂತ ಪಾಟೀಲ ಅವರು ತಮ್ಮ ತಂದೆ ವಿಜಯಕುಮಾರ ಕೆ. ಪಾಟೀಲ ಮಾರ್ಗದರ್ಶನದಲ್ಲಿ ಖಾಲಿಯಿದ್ದ ತಮ್ಮ 8 ಎಕರೆ ಪ್ರದೇಶದ ಗುಡ್ಡದ ಜಮೀನನ್ನೇ ಆಯ್ಕೆಮಾಡಿಕೊಂಡು 3 ಎಕರೆ ಡ್ಯ್ರಾಗನ್ ಫ್ರೂಟ್ ನಾಟಿಮಾಡಿದ್ದು, ಇನ್ನೂ 2 ಎಕರೆ ಇದೇ ಹಣ್ಣಿನ ತೋಟಗಾರಿಕೆ ಮಾಡಲು ಇಳಿಜಾರು ಗುಡ್ಡಕ್ಕೆ ಸಸಿ ನಾಟಿ ಮಾಡಲು ಸಜ್ಜುಗೊಳಿಸಿಟ್ಟಿದ್ದಾರೆ.
ಈ ಗುಡ್ಡ ಕಲ್ಲು ಮಣ್ಣು ಮಿಶ್ರಿತವಾಗಿದೆ. ಗುಡ್ಡಲ್ಲೇ ಎರಡು ಮೂರು ಕೊಳವೆ ಬಾವಿ ತೋಡಿದ್ದು, ಇದರಲ್ಲಿ ಎರಡಕ್ಕೆ ಮಾತ್ರ ನೀರು ದೊರೆತ್ತಿದೆ. ಅಲ್ಲದೆ, ತೋಟಗಾರಿಕೆ ಸಹಾಯಧನದಲ್ಲಿ ಕೃಷಿಹೂಂಡ ನಿರ್ಮಿಸಿ ತೋಡಿದ ಕೊಳವೆ ಬಾವಿ ನೀರು ಕೃಷಿ ಹೂಂಡಾಕ್ಕೆ ಶೇಖರಣೆಮಾಡಿ ಹನಿ ನೀರಾವರಿ ಮೂಲಕ ಬೆಳೆಗೆ ನೀರು ಕೊಟ್ಟಿದ್ದಾರೆ. ಭವಿಷ್ಯದಲ್ಲಿ ಈ ನೀರು ಸಾಕಾಗಾದು ಎಂದು ಗುಡ್ಡದ ಕೆಳಭಾಗದಲ್ಲಿ ತೆರೆದ ಬಾವಿ ಅಥವಾ ಕೊಳವೆ ಭಾವಿಯ ಮೂಲಕ ಹೆಚ್ಚುವರಿ ನೀರು ತರಲು ಮುಂದಾಗಿದ್ದಾರೆ.

ಇವರು ಬೆಳೆದ ಮೂರು ಎಕರೆ ಜಂಬೋರೆಡ್ ತಳಿಯ 6500 ಡ್ಯ್ರಾಗನ್ ಸಸಿಗಳು ಎರಡು ವರ್ಷವಾಗಿದೆ. ಇದಕ್ಕೆ 4 ಲಕ್ಷ ರೂಪಾಯಿ ಖರ್ಚಾಗಿದೆ. ಪ್ರಥಮ ವರ್ಷದಲ್ಲಿ ಕೊಂಚ ಕೈಗೆಟ್ಟುಕುವಷ್ಟು ಫಲ ದೊರೆತ್ತಿದೆ. 2ನೇ ವರ್ಷದಲ್ಲಿ ಬೆಳೆಯನ್ನು ಮಾರಾಟ ಲಾಭ ತಂದುಕೊಟ್ಟಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ಹಂಗಾಮಿಗೆ ಹೆಚ್ಚಿನ ಫಲ ದೊರೆತು ಲಾಭಬರುತ್ತದೆ ಎಂದು ರೈತ ಗುರುಶಾಂತ ಪಾಟೀಲ ಅವರು ಹೇಳಿಕೊಂಡಿದ್ದಾರೆ.
ಕೊರೊನಾ ಕೊಟ್ಟ ಐಡಿಯಾ: ಜನ ಸಮುದಾಯಕ್ಕೆ ಕೊರೊನಾ ಶಾಪವಾಗಿ ಪರಿಣಮಿಸಿತ್ತಾದರು. ಕೆಲವರಿಗೆ ವರವಾಗಿ ನಿಂತುಕೊಂಡಿದೆ. ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಕೋವಿಡ್-19 ಹಿನ್ನೆಲೆಯಲ್ಲಿ ವಿಧಿಸಿದ ಲಾಕ್ಡೌನ್ ವೇಳೆ ಕಲಬುರಗಿಯಲ್ಲೇ ವಾಸವಾಗಿದ್ದ ಗುರುಶಾಂತ ವಿ. ಪಾಟೀಲ ಅವರು ಬೇಸರವಾಗಿ ತಮ್ಮೂರು ಭೂಸನೂರಿಗೆ ಬಂದು ನೆಲಸಿದ ಮೇಲೆ ಮೊಬೈಲ್ನಲ್ಲಿ ಯೂಟುಬ್ ಸರ್ಚ್ ಮಾಡಿದ ವೇಳೆ ಈ ಬೆಳೆ ಬೆಳೆಯುವ ಐಡಿಯಾ ಅವರಿಗೆ ಹೊಳೆದಿದೆ.
ಐಡಿಯಾ ಹೊಳೆದಂತೆ ಖಾಲಿಯಿದ್ದ ಗುಡ್ಡವನ್ನೇ ಬಳಸಿಕೊಳ್ಳಬೇಕು ಎಂದು ಲಕ್ಷಾಂತರ ರೂಪಾಯಿ ವ್ಯಯಮಾಡಿ ಈ ಡ್ಯ್ರಾಗನ್ ಸೇರಿ ಇನ್ನಿತರ ಹಣ್ಣಿನ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾದರು.
ಮೊದಲು ನೀರಿನ ವ್ಯವಸ್ಥೆಗೆ ಮೂರು ಕೊಳವೆ ಬಾವಿ ತೋಡಿದಾಗ ಎರಡಕ್ಕೆ 2 ಇಂಚು ನೀರು ದೊರೆಯುತು. ಎಡ್ಮೂರು ತಿಂಗಳ ಜೆಸಿಬಿಯಿಂದ ಗಿಡಗಂಟಿ, ಕಲ್ಲು ತೆರವುಗೊಳಿಸಿ ಸಸಿ ನಾಟಿಗೆ ಸಾಲುಬಿಟ್ಟಿದ್ದರು. ಗುಡ್ಡ ಹತ್ತಿ ಬರಲು ನಾಲೆಗೆ ಅಡ್ಡಲಾಗಿ ಸೇತುವೆ ಮಾಡಿಕೊಂಡಿದ್ದಾರೆ.
ಡ್ರ್ಯಾಗನ್ ಬಗ್ಗೆ ಯುಟ್ಯೂಬನಲ್ಲಿ ಗಮನಿಸಿ ಮಹಾರಾಷ್ಟ್ರದ ಸಾಂಗೋಲಾದ ರೈತರೊಬ್ಬರು ಬೆಳೆದ ಶ್ರೀಲಂಕಾದ ಜಂಬೋರೇಟ್ ಡ್ಯ್ರಾಗನ್ ಸಸಿಯನ್ನು ಖರೀದಿಸಿ ಅಗಷ್ಟ 2021ರಲ್ಲಿ ಸಸಿ ನಾಟಿ ಮಾಡಿ ಮೂರುವರೆ ವರ್ಷದ ಬೆಳೆ ಯಶಸ್ವಿಯಾಗಿ ಬೆಳೆದಿದ್ದು ಸದ್ಯ ಉತ್ತಮ ಫಸಲು ಪಡೆಯುತ್ತಿದ್ದಾರೆ. ಇಂಥ ರೈತರ ಕೃಷಿ ಉದ್ಯಮೆಯನ್ನಾಗಿಸಲು ಸರ್ಕಾರ ನಿರೀಕ್ಷೆಯ ಮಟ್ಟದಲ್ಲಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ.
50 ಸಾವಿರ ಸಾಯಧನ: ರೈತ ಗುರುಶಾಂತ ಪಾಟೀಲ ಅವರು, ವೇಸ್ಟ್ಲ್ಯಾಂಡ್ನಲ್ಲಿ ಮಾದರಿ ತೋಟಗಾರಿಕೆ ಮಾಡಿದ್ದಾರೆ, ಡ್ರ್ಯಾಗನ್ ಫ್ರೂಟ್ ಬಹುವಾರ್ಷಿಕ ಬೆಳೆಯಾಗಿದೆ. ಈ ರೈತರಿಗೆ ತೋಟಗಾರಿಕೆ ಇಲಾಖೆಯ ಅನುಷ್ಠಾನದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ತಲಾ ಹೆಕ್ಟರಿಗೆ 50 ಸಾವಿರ ರೂಪಾಯಿ ನೀಡಲಾಗುತ್ತಿದೆ. ಜಿಲ್ಲೆಯಲ್ಲೇ ತಾಲೂಕಿನಲ್ಲಿ 12 ಎಕರೆ ಹೆಚ್ಚಿನ ಬೆಳೆ ರೈತರು ಬೆಳೆದಿದ್ದಾರೆ. ಈ ಹಣ್ಣು ರೋಗ ನಿರೋಧಕ ಶಕ್ತಿ ಹೊಂದಿದ್ದು, ಅಲ್ಲದೆ, ಪೌಷ್ಠಿಕಾಂಶದಿಂದ ಕೂಡಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೊಳ ಅವರು ತಿಳಿಸಿದ್ದಾರೆ.

ಸಾವಯವ ಪದ್ಧತಿ ಸ್ವಾದಭರಿತ: ಬೆಳೆಯನ್ನು ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದರಿಂದ ಸ್ವಾದ ಭರತಿವಾಗಿದೆ. ನೇರವಾಗಿ ಗ್ರಾಹಕರು ಕೊಂಡುಕೊಳ್ಳಲು ಬರುತ್ತಿದ್ದಾರೆ. ಅವರಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ಹೆಚ್ಚಿನ ಹಣ್ಣನ್ನು ಕಲಬುರಗಿ ಮಾರುಕಟ್ಟೆಗೆ ಕಳುಹಿಸಿಕೊಡಲಾಗುತ್ತಿದೆ. ಬೆಳೆಯ ಹಣ್ಣಿನ ಕುರಿತು ಬೆಳೆ ಬೆಳೆಯಲು ಮುಂದಾಗುವ ರೈತರು ನೇರವಾಗಿ ಮೊಬೈಲ್ ಸಂಖ್ಯೆ 9448577458 ಸಂಪರ್ಕಿಸಲು ಗುರುಶಾಂತ ಪಾಟೀಲ ಅವರು ತಿಳಿಸಿದ್ದಾರೆ.